ಭದ್ರಾ ನದಿಯು ವಶಿಷ್ಠ ತೀರ್ಥದಲ್ಲಿ ಮೈದುಂಬಿ ಹರಿಯುತ್ತಿರುವುದು. 
ನ್ಯೂಸ್

ಕೊಚ್ಚಿಹೋದ ಕಗ್ಗನಳ್ಳ ಕಾಲುಸಂಕ

ಎಸ್.ಎನ್.ರವೀಂದ್ರ

ಕಳಸ: ತಾಲೂಕಿನಲ್ಲಿ ಶುಕ್ರವಾರ ಮಳೆ ಸ್ವಲ್ಪ ಕ್ಷೀಣಿಸಿದೆ. ಗುರುವಾರ ಬೆಳಗ್ಗೆ ಅಬ್ಬರಿಸಿದ ವರುಣ ಮಧ್ಯಾಹ್ನ ಸ್ವಲ್ಪ ಕ್ಷೀಣಿಸಿ ಶುಕ್ರವಾರವೂ ಮುಂದುವರಿಯಿತು.

ತುಂಬಿ ಹರಿಯುತ್ತಿದ್ದ ಭದ್ರೆಯ ನೀರಿನ ಮಟ್ಟ ಸ್ವಲ್ಪ ತಗ್ಗಿದೆ.
ಕಳಸದ ಕಗ್ಗನಳ್ಳ ಸಮೀಪ ಭದ್ರಾ ನದಿ ದಾಟಲು ಗ್ರಾಮಸ್ಥರೇ ನಿರ್ಮಿಸಿದ್ದ ಕಾಲುಸಂಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇಡಕಣಿ ಗ್ರಾಮದ ನಾಗನಮಕ್ಕಿ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ.
ಕುದುರೆಮುಖದ ಕೆಂಕನಕೊಂಡ ಎಂಬಲ್ಲಿ ಗುರುವಾರ ರಾತ್ರಿ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಕಡಿತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು. ರಜೆಯನ್ನು ಜು.8ಕ್ಕೂ ಮುಂದುವರಿಸಲಾಗಿದೆ.