ನ್ಯೂಸ್

ಅಂಗನವಾಡಿ ಮಕ್ಕಳಿಗೆ ನೀಡಿದ ಆಹಾರದಲ್ಲಿ ಹುಳ ಪತ್ತೆ: ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಕಿಡಿ! | Anganwadi

Anganwadi: ಮುಂಬೈನ ಅಂಧೇರಿಯ ಅಂಗನವಾಡಿ ಕೇಂದ್ರವೊಂದರಲ್ಲಿ ಮಕ್ಕಳಿಗೆ ನೀಡಲಾದ ಖಿಚಡಿವೊಂದರಲ್ಲಿ ಹುಳಗಳು ಪತ್ತೆಯಾಗಿದ್ದು, ಈ ಆರೋಪದ ಬಗ್ಗೆ ಮಹಾರಾಷ್ಟ್ರದ ಮಾಜಿ ಸಚಿವೆ ವರ್ಷಾ ಗಾಯಕ್ವಾಡ್​ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಗ್ರಿಷ್ಮಾ ಮಹಿಳಾ ಮಂಡಲ್​ ಒಪ್ಪಂದ ಮಾಡಿಕೊಂಡ ಮಹಿಳಾ ಸ್ವಸಹಾಯ ಗುಂಪು ಪೂರೈಸಿದ ಊಟದಲ್ಲಿ ಹುಳಗಳಿರುವುದನ್ನು ಕಂಡುಕೊಂಡಿದ್ದಾರೆ. ಅದೃಷ್ಟವಶಾತ್​ ಮಕ್ಕಳಿಗೆ ಊಟ ಬಡಿಸುವ ಮೊದಲೇ ಸಿಬ್ಬಂದಿ ಗಮನಿಸಿದ್ದು, ಈ ವಿರುದ್ಧ ಅಂಗನವಾಡಿ ನೌಕರರ ಸಂಘವು ಯೋಜನ ಕಚೇರಿಗೆ ದೂರು ನೀಡಿದ್ದಾರೆ.

ಅಂಗನವಾಡಿಯಲ್ಲಿ ಪದೇಪದೇ ಕಳಪೆ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಆತಂಕದ ವಿಚಾರ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ರೀತಿಯಾಗಿ ಅಂಗನವಾಡಿಯವರು ಮಕ್ಕಳಿಗೆ ಕಲುಷಿತ ಆಹಾರ ನೀಡಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗಾಯಕ್ವಾಡ ಕಿಡಿಕಾರಿದ್ದಾರೆ.

ಈ ಘಟನೆಯನ್ನು ಐಸಿಡಿಎಸ್ ಅಧಿಕಾರಿಗಳು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಯೋಜನಾ ಅಭಿವೃದ್ಧಿ ಅಧೀಕಾರಿ ಅಬ್ದುಲ್​ ಚೌಧರಿ ಪ್ರಕರಣದ ಬಗ್ಗೆ ಮಾತನಾಡಿದ್ದು, ಕಳಪೆ ಆಹಾರ ಹೇಗೆ ಸರಬರಾಜು ಆಗಿದೆ ಎಂಬುದುನ್ನು ಪರಿಶೀಲಿಸುತ್ತಿದ್ದೇನೆ. ಹಾಗೂ ಸಂಶೋಧನೆಯ ಆಧಾರದ ಮೇಲೆಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)