ನ್ಯೂಸ್

Worlds Tallest Dog: ವಿಶ್ವದ ಅತಿ ಎತ್ತರದ ಶ್ವಾನ ಕ್ಯಾನ್ಸರ್​​ನಿಂದ ಸಾವು

ಅಮೆರಿಕಾ: ವಿಶ್ವದ ಅತಿ ಎತ್ತರದ ಶ್ವಾನ ಎಂಬ ಗಿನ್ನಿಸ್ ದಾಖಲೆಯನ್ನು ಹೊಂದಿರುವ ಜೀಯಸ್ ತನ್ನ ಮೂರನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದೆ.

ಜೀಯಸ್​​ ಸೆಪ್ಟೆಂಬರ್ 12 ರಂದು ಕ್ಯಾನ್ಸರ್​​ನಿಂದ ಸಾವನ್ನಪ್ಪಿದೆ ಎಂದು ಜೀಯಸ್ ಮಾಲೀಕರು ಬಹಿರಂಗಪಡಿಸಿದರು. 2022ರಲ್ಲಿ 1.046 ಮೀ (3 ಅಡಿ 4.18 ಇಂಚು) ಎತ್ತರದೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗೆದ್ದ ಜೀಯಸ್, ಮೂರನೇ ವಯಸ್ಸಿನಲ್ಲಿ ಮೂಳೆ ಕ್ಯಾನ್ಸರ್​​​ನಿಂದ ನಿಧನವಾಗಿದೆ ಎಂದು ಶ್ವಾನದ ಮಾಲೀಕ ಬ್ರಿಟಾನಿ ಡೇವಿಸ್ ಬಹಿರಂಗಪಡಿಸಿದ್ದಾರೆ. "ನನ್ನ ಜೀಯಸ್ ನಿಧನವಾಗಿದ್ದು, ನಮಗೆ ತುಂಬಾ ದುಃಖವಾಯಿತು," ನ್ಯುಮೋನಿಯಾದಿಂದ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

ಜೀಯಸ್ ಆಗಸ್ಟ್‌ನಿಂದ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. ಶ್ವಾನದ ಬಲಗಾಲನ್ನು ಮೊದಲು ಕತ್ತರಿಸಲಾಯಿತು. ಜೀಯಸ್‌ನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಲು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳಲಾಯಿತ್ತು. 2,70,259 ರೂ. ಸಂಗ್ರಹಿಸಲಾಗಿತ್ತು. ಜೀಯಸ್ ಸೆಪ್ಟೆಂಬರ್ 7 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿತ್ತು. ಆದರೆ ನಂತರ ಕೆಲವು ಸಮಸ್ಯೆಗಳು ಎದುರಾಗಿ ಪ್ರಾಣ ಬಿಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜೀಯಸ್ ಅಂತಿಮವಾಗಿ ಡೇವಿಸ್ನ ತೋಳುಗಳಲ್ಲಿ ನಿಧನರಾದರು. ಡೇವಿಸ್‌ನೊಂದಿಗೆ ಬೀದಿಗಳಲ್ಲಿ ತಿರುಗುತ್ತಿದ್ದರೆ ಎಲ್ಲರ ಕಣ್ಣುಗಳು ಜೀಯಸ್‌ನ ಮೇಲಿದ್ದವು. ಮಾರ್ಚ್ 2022 ರಲ್ಲಿ, ಜೀಯಸ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಗೆದ್ದ ನಂತರ ಅತ್ಯಂತ ಉದ್ದವಾದ ನಾಯಿ ಎಂದು ಪ್ರಸಿದ್ಧವಾಗಿತ್ತು.