ಸಮುದಾಯದ ಸಂಘರ್ಷದಲ್ಲಿ, ತಮಗೆ ಅನ್ಯಾಯ ಆಗಿದೆ ಎಂಬ ಭಾವದಿಂದ ಹಿಂಸೆಯ ದಾರಿಯನ್ನು ಹಿಡಿದಿರುವವರಲ್ಲಿ, ಸರಿಯಾದ ಪ್ರಸ್ತಾವನೆಯ ಮೂಲಕ ಮಾತುಕತೆಯನ್ನು ಆರಂಭಿಸಬಹುದು. ಅವರ ದೃಷ್ಟಿಕೋನದಲ್ಲಿ ನೋಡಿದಾಗ, ಅವರು ನೈತಿಕತೆಗಾಗಿ ಹೋರಾಡುತ್ತಿದ್ದಾರೆ. ಒಂದು ರೀತಿಯಲ್ಲಿ, ಅವರ ಕೆಚ್ಚು, ಬದ್ಧತೆ, ತ್ಯಾಗಭಾವವು ಶ್ಲಾಘನೀಯವಾದದ್ದೇ. ಅವರಲ್ಲಿರುವ ಬಾಹ್ಯದ ಕ್ರಿಯಾಶೀಲತೆಯು ಅವರ ಆಂತರಿಕ ಶಾಂತಿಯೊಡನೆ ಬೆರೆತರೆ, ಅದು ಸಮಾಜಕ್ಕೆ ವರವಾಗಬಲ್ಲದು.
ನಕ್ಸಲೀಯರಿಂದ ಪೀಡಿತವಾದ ಪ್ರದೇಶಗಳಲ್ಲಿ ನಡೆಯುತ್ತಿ ರುವ ನಮ್ಮ ಅನೇಕ ಉಚಿತ ಗ್ರಾಮೀಣ- ಬುಡಕಟ್ಟು ಶಾಲೆಗಳನ್ನು ನಡೆಸುತ್ತಿರುವವರು ಮಾಜಿ ನಕ್ಸಲೀಯರೆ ಆಗಿದ್ದಾರೆ.! ಆರಂಭದಲ್ಲಿ ಆ ಶಾಲೆಗಳನ್ನು ಮುಚ್ಚಲು ನಮ್ಮ ಸ್ವಯಂಸೇವಕರಿಗೆ ಅವರು ಬೆದರಿಕೆಯನ್ನು ಒಡ್ಡಿದರು. ಆದರೆ ತಮ್ಮದೇ ಸಮುದಾಯಕ್ಕೆ ಅದರಿಂದ ಲಾಭವಾಗುತ್ತಿರುವುದನ್ನು ಕಂಡ ಮೇಲೆ, ಅವರೇ ಸ್ವಯಂ
ಸೇವಕರಾಗಿಬಿಟ್ಟರು. ಆದರೆ ಧಾರ್ವಿುಕ ಮತಾಂಧತೆಯಿಂದ ಉಂಟಾಗುವ ಭಯೋತ್ಪಾದನೆಗೆ ಕೇವಲ ಮಾತುಕತೆ ಸಾಲದು. ಅವರ ದೃಷ್ಟಿಯಲ್ಲಿ, ಅವರ ಗ್ರಂಥವನ್ನು ಒಪ್ಪದಿರುವವರು ಅಥವಾ ಬೇರೆ ರೀತಿಯಲ್ಲಿ ಚಿಂತಿಸುವವರಿಗೆ ಬದುಕುವ ಹಕ್ಕೇ ಇರುವುದಿಲ್ಲ ಎಂದು ಭಾವಿಸುತ್ತಾರೆ. ಈ ರೀತಿಯ
ಧರ್ವಂಧತೆಯ ಮನೋಧೋರಣೆಯು ಹರಡದಿ ರುವಂತೆ ತಡೆಯಲು ಧಾರ್ವಿುಕ ನಾಯಕರು ಬಲು ದೊಡ್ಡ ಪಾತ್ರವನ್ನು ವಹಿಸಬಲ್ಲರು. ಬಹು-ಧಾರ್ವಿುಕ ಶಿಕ್ಷಣ ವನ್ನು, ಶಾಂತಿಯ ಶಿಕ್ಷಣವನ್ನು ಕೊಡಿಸುವಲ್ಲಿ ಅವರ ಪಾತ್ರ ದೊಡ್ಡದು. ಸ್ವರ್ಗಕ್ಕೆ ನಾವು ಮಾತ್ರವೇ ಒಡೆಯರು ಎಂಬ ಮನೋಧೋರಣೆ ಯಿಂದ, ಒಂದೇ ಗುರಿಗೆ ಅನೇಕ ಪಥಗಳು ಎಂಬ ಸೈದ್ಧಾಂತಿಕ ಮಾರ್ಪಾಟನ್ನು ಈಗ ತರಬೇಕಿದೆ. ಜಗತ್ತು ವೈವಿಧ್ಯದಿಂದ ಕೂಡಿದೆ ಮತ್ತು ಆ ವೈವಿಧ್ಯವನ್ನು ಗೌರವಿಸಬೇಕು ಎಂಬ ಭಾವವು ಮೂಡಿದಾಗ,ಅವುಗಳನ್ನು ಸಂಭ್ರಮಿಸಲು ಆರಂಭಿಸುತ್ತೇವೆ. ನೀವು ಪ್ರೀತಿಸದಿರುವು
ದನ್ನು ಮಾತ್ರ ಸಹಿಸಿಕೊಳ್ಳುತ್ತೀರಿ. ಒಂದು ಧರ್ಮವು ಕೇವಲ ನನ್ನದಾಗಿ ರುವುದರಿಂದ ಮಾತ್ರ ಮಹಾನ್ ಆದುದಲ್ಲ. ಅದು ಧರ್ಮದಿಂದಲೇ ಮಹಾನ್ ಆದದ್ದು. ಈ ತಿಳಿವಳಿಕೆಯನ್ನು ಎಲ್ಲ ಪಂಡಿತರಲ್ಲಿ, ಪಾದ್ರಿಗಳಲ್ಲಿ, ಇತರ ಆಧ್ಯಾತ್ಮಿಕ ಹಾಗೂ ಧಾರ್ವಿುಕ ನಾಯಕರಲ್ಲಿ ಮೂಡಿಸಿದಾಗ, ನಮ್ಮ ಸುಂದರವಾದ ಜಗತ್ತಿನಲ್ಲಿ ಹೊಗೆಯಾಡುತ್ತಿರುವ ಮತಾಂಧತೆ, ಮೂಲಭೂತವಾದವೆಲ್ಲವೂ ಕೊನೆಯಾಗುತ್ತದೆ. ವಾಸ್ತವದಲ್ಲಿ ವಿವಿಧ ಧರ್ಮಗಳ ನಡುವೆ ಸಂಘರ್ಷವಿಲ್ಲ. ಎಲ್ಲಾ ಧರ್ಮಗಳಲ್ಲೂ ಒಂದು ಸಾಮಾನ್ಯವಾದ ಎಳೆಯಿದೆ. ಆದರೆ ಅಪಾರ್ಥಗಳು ಘರ್ಷಣೆಗಳಿಗೆ ಎಡೆಮಾಡಿಕೊಡುತ್ತದೆ. ಅನೇಕ ಜನರ ಮನೆಗಳಲ್ಲಿ ನಡೆಯುವುದೂ ಇದೇ. ಹೆತ್ತವರು ತಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಮಕ್ಕಳು ದೂರಿದರೆ, ಮಕ್ಕಳು ತಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಹೆತ್ತವರು ದೂರುತ್ತಾರೆ. ನಮ್ಮನ್ನು ಅಪಾರ್ಥ ಮಾಡಿಕೊಳ್ಳಲಾಗಿದೆಯೆಂದು ಭಾವಿಸುತ್ತೇವೆ ಮತ್ತು ಇದೊಂದು ಸಾಮಾನ್ಯವಾದ ಸಮಸ್ಯೆ. ಆದರೆ ಮತ್ತೊಬ್ಬರನ್ನು ದೂಷಿಸುವ ಬದಲಿಗೆ ನಮ್ಮ ಅಭಿವ್ಯಕ್ತಿಯನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕು.
ನಿಜವಾದ ಸಂಪರ್ಕವು ಮಾತುಗಳಿಗೆ ಅತೀತವಾಗಿರುವಂಥದ್ದು. ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲಂತಹ, ಪ್ರಾಣಿಗಳೂ, ಮರಗಳೂ ಅರ್ಥ ಮಾಡಿಕೊಳ್ಳಬಲ್ಲಂತಹ ಒಂದು ಭಾಷೆಯಿದೆ. ಅದೇ ಹೃದಯದ ಭಾಷೆ. ಮಾತನಾಡಲೂ ಬರದೆ ಇರುವಂತಹ ಒಂದು ಪುಟ್ಟ ಮಗುವಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಮಾತಿಲ್ಲದೆಯೇ ತನ್ನ ಎಲ್ಲಾ ಭಾವನೆಗಳನ್ನೂ ಒಂದೇ ನೋಟದಲ್ಲಿ ವ್ಯಕ್ತಪಡಿಸುತ್ತದೆ. ಅಥವಾ ನೀವು ಕಚೇರಿಯಿಂದ ಹಿಂದಿರುಗಿದಾಗ ಬಲು ಉತ್ಸಾಹದಿಂದ ನಿಮ್ಮನ್ನು ಸ್ವಾಗತಿಸುವ ನಿಮ್ಮ ನಾಯಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದರ ಅಸ್ತಿತ್ವದಲ್ಲೇ ಪ್ರೇಮವನ್ನು ತೋರುತ್ತದೆ. ಪ್ರಕೃತಿಯಲ್ಲಿ ಒಂದು ನಿಯಮವಿದೆ. ಏನನ್ನು ಕೊಡುತ್ತೀರೋ, ಅದೇ ನಿಮ್ಮ ಬಳಿಗೆ ತಿರುಗಿ ಬರುತ್ತದೆ. ನೀವು ಪ್ರೇಮದಲ್ಲಿ ಮುಳುಗಿದ್ದಾಗ, ಪ್ರೇಮವನ್ನೇ ಹೊರಸೂಸುತ್ತೀರಿ ಮತ್ತು ನಿಮ್ಮ ಸುತ್ತಲೂ ಇರುವ ಜನರೂ ಅದೇ ಪ್ರೇಮವನ್ನು ಪ್ರತಿಫಲಿಸುತ್ತಾರೆ. ನಮ್ಮ ಆತ್ಮದ ಸ್ವಭಾವವೇ ಶಾಂತಿ. ಇಂದಿನ ಅಂತಾರಾಷ್ಟ್ರೀಯ ಶಾಂತಿಯ ದಿನ ದಂದು ಪ್ರೇಮಮಯಿಗಳಾಗಿ, ಶಾಂತಿಯುತರಾಗಿ, ಕರುಣಾಮಯಿಗಳಾಗಿ ಇರುವುದರಲ್ಲಿ ಹೆಮ್ಮೆ ಯನ್ನು ಹೊಂದೋಣ. ನಮ್ಮ ಆಂತರ್ಯದಲ್ಲಿ ಶಾಂತಿಯನ್ನು ಸಾಧಿಸದ ತನಕ, ವಿಶ್ವ ಶಾಂತಿ ಉಂಟಾಗಲು ಸಾಧ್ಯವಿಲ್ಲ.