World Heritage Day 2025 | ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸಲಾಗುತ್ತದೆ. ಇದು ಜಗತ್ತಿನಾದ್ಯಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ ಎಂದೂ ಕರೆಯಲ್ಪಡುವ ಈ ದಿನವನ್ನು 1982ರಲ್ಲಿ ಅಂತರರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಮಂಡಳಿ ಸ್ಥಾಪಿಸಿತು. ಪ್ರಪಂಚದಾದ್ಯಂತ 1200 ಕ್ಕೂ ಹೆಚ್ಚು ಆಸ್ತಿಗಳನ್ನು ಯುನೆಸ್ಕೋ ವಿಶ್ವ ಪರಂಪರೆಯು ಒಳಗೊಂಡಿದೆ. ಹಾಗಾದ್ರೆ ಎಲ್ಲೆಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ ಗೊತ್ತಾ? ಬನ್ನಿ ತಿಳಿಯೋಣ.
ಭಾರತದಲ್ಲಿ 43 ಆಸ್ತಿಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸಲಾಗಿದೆ. ಇದರ ಪ್ರಾಮುಖ್ಯತೆ ಮತ್ತು ಭವ್ಯತೆಯನ್ನು ನೋಡಲು ಈ ವಿಶ್ವ ಪರಂಪರೆಯ ತಾಣಗಳಿಗೆ ಭೇಟಿ ನೀಡಬೇಕು. ಭಾರತದಲ್ಲಿ ಭೇಟಿ ನೀಡಲೇಬೇಕಾದ ಕೆಲವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಇಲ್ಲಿವೆ ನೋಡಿ
ತಾಜ್ ಮಹಲ್, ಆಗ್ರಾ (ಉತ್ತರ ಪ್ರದೇಶ)
ಇದು ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ನಿರ್ಮಿಸಿದ ಬಿಳಿ ಅಮೃತಶಿಲೆಯ ಸಮಾಧಿಯಾಗಿದೆ. ತಾಜ್ ಮಹಲ್ ಪ್ರೀತಿಯ ಸಂಕೇತವಾಗಿ ನಿಂತಿದೆ ಮತ್ತು ಮೊಘಲ್ ವಾಸ್ತುಶಿಲ್ಪವನ್ನು ಸಹ ಪ್ರದರ್ಶಿಸುತ್ತದೆ.
ಕುತುಬ್ ಮಿನಾರ್ , ದೆಹಲಿ
ಇದನ್ನು 13 ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ 73ಮೀ ಎತ್ತರದ ಮಿನಾರ್ ಆಗಿದೆ. ಕುವ್ವಾತ್-ಉಲ್-ಇಸ್ಲಾಂ ಮಸೀದಿ ಮತ್ತು ಕಬ್ಬಿಣದ ಕಂಬದಂತಹ ಐತಿಹಾಸಿಕ ರಚನೆಗಳಿಂದ ಸುತ್ತುವರೆದಿರುವ ಈ ಸ್ಥಳವು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಮತ್ತು ದೆಹಲಿಯ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುತ್ತದೆ.
ಖಜುರಾಹೊ ಸ್ಮಾರಕ ಸಮೂಹ (ಮಧ್ಯಪ್ರದೇಶ)
9 ನೇ ಮತ್ತು 11 ನೇ ಶತಮಾನಗಳ ನಡುವೆ ನಿರ್ಮಿಸಲಾದ ಇವು ಭಾರತೀಯ ದೇವಾಲಯ ವಾಸ್ತುಶಿಲ್ಪದ ಮೇರುಕೃತಿಗಳಾಗಿವೆ. ಇವು ಹಿಂದೂ ಮತ್ತು ಜೈನ ದೇವಾಲಯಗಳ ಗುಂಪಾಗಿದ್ದು, ಪ್ರೀತಿ, ಜೀವನ ಮತ್ತು ಆಧ್ಯಾತ್ಮಿಕತೆಯನ್ನು ಆಚರಿಸುವ ಅದ್ಭುತ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ.
ಕೆಂಪು ಕೋಟೆ , ದೆಹಲಿ
ಇದು ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದೆ. ಕೆಂಪು ಕೋಟೆಯು ಮೊಘಲ್ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು ಮತ್ತು ಅದರ ಬೃಹತ್ ಕೆಂಪು ಮರಳುಗಲ್ಲಿನ ಗೋಡೆಗಳು, ಅರಮನೆಗಳು ಮತ್ತು ಸಭಾಂಗಣಗಳು ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವನ್ನು ಪ್ರದರ್ಶಿಸುತ್ತವೆ.
ಸೂರ್ಯ ದೇವಾಲಯ, ಕೊನಾರ್ಕ್ (ಒಡಿಶಾ)
13ನೇ ಶತಮಾನದ ಸೂರ್ಯ ದೇವಾಲಯವು ಸೂರ್ಯ ದೇವರಿಗೆ ಸಮರ್ಪಿತವಾದ ಬೃಹತ್ ರಥದ ಆಕಾರದಲ್ಲಿದೆ. ಇದು ಭಾರತದ ಪ್ರಾಚೀನ ವಾಸ್ತುಶಿಲ್ಪದ ಪ್ರತಿಭೆಯನ್ನು ಸಂಕೇತಿಸುವ ಕಲ್ಲಿನ ಕೆತ್ತನೆಗಳು ಮತ್ತು ಎಂಜಿನಿಯರಿಂಗ್ ಅದ್ಭುತಗಳಿಗೆ ಹೆಸರುವಾಸಿಯಾಗಿದೆ.
ಎಲಿಫೆಂಟಾ ಗುಹೆಗಳು (ಮಹಾರಾಷ್ಟ್ರ)
ಈ ಗುಹೆಗಳು ಕೆಲವು ಆರಂಭಿಕ ಬೌದ್ಧ ವಾಸ್ತುಶಿಲ್ಪಗಳಾಗಿವೆ. ಅವು ಶಿಲ್ಪಗಳು ಮತ್ತು ಭಿತ್ತಿಚಿತ್ರಗಳಿಗೆ ಹೆಸರುವಾಸಿಯಾಗಿವೆ. ಅಜಂತಾದ ವರ್ಣಚಿತ್ರಗಳು ಮತ್ತು ಶಿಲ್ಪಗಳು ಬೌದ್ಧ ಧಾರ್ಮಿಕ ಕಲೆಯ ಮೇರುಕೃತಿಗಳಾಗಿವೆ. ಮತ್ತೊಂದೆಡೆ ಎಲ್ಲೋರಾ ಗುಹೆಗಳು ಬೌದ್ಧಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮದ ಸುತ್ತ 34 ಮಠಗಳು ಮತ್ತು ದೇವಾಲಯಗಳನ್ನು ಹೊಂದಿವೆ.
ಚೋಳ ದೇವಾಲಯಗಳು (ತಮಿಳುನಾಡು)
ಈ ದೇವಾಲಯಗಳನ್ನು ಚೋಳ ಸಾಮ್ರಾಜ್ಯದ ರಾಜರು ನಿರ್ಮಿಸಿದ್ದರು ಮತ್ತು ಅವು ದಕ್ಷಿಣ ಭಾರತದಾದ್ಯಂತ ಹರಡಿದ್ದವು. ವಿಶ್ವ ಪರಂಪರೆಯ ತಾಣವು ಮೂರು ದೇವಾಲಯಗಳನ್ನು ಒಳಗೊಂಡಿದೆ; ತಂಜಾವೂರಿನ ಬೃಹದೀಶ್ವರ ದೇವಸ್ಥಾನ, ಗಂಗೈಕೊಂಡಚೋಳೀಶ್ವರಂನಲ್ಲಿರುವ ಬೃಹದೀಶ್ವರ ದೇವಸ್ಥಾನ ಮತ್ತು ದಾರಾಸುರಂನಲ್ಲಿರುವ ಐರಾವತೇಶ್ವರ ದೇವಸ್ಥಾನ. ಈ ದೇವಾಲಯಗಳು ಚೋಳ ರಾಜವಂಶದ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿವೆ.
ಹೀಗೆ ಈ ಎಲ್ಲಾ ಅದ್ಭುತ ಸ್ಥಳಗಳು ಭಾರತದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಜೊತೆ ಒಮ್ಮೆಯಾದರೂ ಇಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿನೀಡಿ.(ಏಜೆನ್ಸೀಸ್)