ಬಾಳೆಹೊನ್ನೂರಿನ ಜೆಸಿಐನಿಂದ ಮುದುಗುಣಿಯಲ್ಲಿ ತೆಂಗಿನ ಸಸಿ ನೆಡಲಾಯಿತು. ಶಶಿಧರ್, ಕೆ.ಎನ್.ಮರಿಗೌಡ, ಸದಾಶಿವ ಆಚಾರ್ಯ, ಎಂ.ಡಿ.ಶಿವರಾಮ್ ಇತರರಿದ್ದರು. 
ನ್ಯೂಸ್

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ

ಬಾಳೆಹೊನ್ನೂರು: ಪರಿಸರ ಎಲ್ಲ ಜೀವಿಗಳಿಗೆ ಆಶ್ರಯ ನೀಡಿದೆ. ಪ್ರಕೃತಿಕ ರಕ್ಷಣೆ ಎಲ್ಲರ ಕರ್ತವ್ಯ ಎಂದು ಜೇಸಿ ಅಧ್ಯಕ್ಷ ಎನ್.ಶಶಿಧರ್ ಹೇಳಿದರು.
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬುಧವಾರ ಮುದುಗುಣಿ ಶಿವಗಂಗಾ ಮಠದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಟ್ಟು ಮಾತನಾಡಿದರು.
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ರಾಸಾಯನಿಕದಿಂದ ವಿಷಪೂರಿತ ಆಹಾರವನ್ನೇ ನಾವು ಸೇವಿಸುವಂತಾಗಿದೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು ಎಂದರು.
ಸಿದ್ದೇಶ್ವರ ದೇಗುಲದ ಅಧ್ಯಕ್ಷ ಕೆ.ಎನ್.ಮರಿಗೌಡ ಮಾತನಾಡಿ, ನಮ್ಮೆಲ್ಲರನ್ನು ಹೊತ್ತು ರಕ್ಷಣೆ ಮಾಡುತ್ತಿರುವ ಪ್ರಕೃತಿ ಮಾತೆಗೆ ಪ್ರತಿ ದಿನ ನಮಿಸಿ ನಮ್ಮ ಕಾಯಕ ಆರಂಭಿಸುವುದರಿಂದ ಶ್ರೇಯಸ್ಸು ಲಭಿಸಲಿದೆ ಎಂದು ಹೇಳಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಜೇಸಿ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸುಧಾಕರ್, ಸಿ.ಪಿ.ರಮೇಶ್, ರಿಚರ್ಡ್ ಮಥಾಯಿಸ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್, ಜೇಸಿ ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಸದಸ್ಯರಾದ ಪ್ರಕಾಶ್ ಮುದುಗುಣಿ, ನಿಖಿಲೇಶ್, ಎಸ್.ಕೆ.ರಫಿ, ಶಾಹಿದ್, ಸುನೀಲ್ ಇತರರಿದ್ದರು.