ನ್ಯೂಸ್

ದುಶ್ಚಟಗಳಿಂದ ದೂರವಾದರೆ ವಿಕಲತೆ ಪ್ರಮಾಣ ಕಡಿಮೆ; ಸ್ವಾಮೀಜಿ

ರಾಣೆಬೆನ್ನೂರ: ಇಂದಿನ ಕಾಲದಲ್ಲಿ ಅಂಗವಿಕಲತೆ ಹೆಚ್ಚಾಗಿ ಕಾಣುತ್ತದೆ. ಇದಕ್ಕೆ ಕಾರಣ ಅನುವಂಶಿಯತೆ ಅಂದರೆ ತಂದೆ-&ತಾಯಿಗಳು ಆರೋಗ್ಯವಂತರಾಗಿ ದುಶ್ಚಟಗಳಿಂದ ದೂರವಾದರೆ ವಿಕಲತೆ ಪ್ರಮಾಣ ಹೆಚ್ಚು ಕಂಡುಬರುವುದಿಲ್ಲ ಎಂದು ತಿಪ್ಪಾಯಿಕೊಪ್ಪದ ಜಂಗಮಕ್ಷೇತ್ರದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಸೇವಾ ಅಂಧರ ಸಂಸ್ಥೆ, ಶ್ರೀ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಕಿವುಡ ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಒಳ್ಳೆಯ ನಡೆ-ನುಡಿಗಳಿಂದ ಇದ್ದರೆ ಮುಂದೆ ಜನಿಸುವ ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆದು ಬದುಕುತ್ತವೆ. ಮೌನಾಚರಣೆಯ ಒಂದು ಉದಾಹರಣೆ ಕೊಟ್ಟು ಈ ಮಕ್ಕಳ ಮನಸ್ಸು ಶುದ್ದಿಯಾಗಿದೆ. ಈ ಮಕ್ಕಳು ದೇವರ ಮಕ್ಕಳು ಎಂದರು.

ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜಟಗಿ ವಿಶ್ವ ಕಿವುಡ ಮಕ್ಕಳ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯದಶಿರ್ ರೇಣುಕಾ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಅಂಗವಿಕಲ ಮಕ್ಕಳಿಂದ ವಿವಿಧ ಸಾಂಸತಿ ಕಾರ್ಯಕ್ರಮ ಜರುಗಿದವು.

ಅಧ್ಯಕ್ಷ ಎಚ್​.ಆರ್​. ಶಿವಕುಮಾರ, ಜಿಲ್ಲಾ ಅಂಗವಿಕಲರ ಸಂದ ಉಪಾಧ್ಯಕ್ಷ ಮೌನೇಶ ಬಡಿಗೇರ, ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ನಗರಸಭೆ ಸದಸ್ಯ ಶೇಖಣ್ಣ ಹೊಸಗೌಡ್ರ, ಮಂಜುನಾಥ ದುಗ್ಗತ್ತಿ, ಬಸವರಾಜ ಎಮ್ಮೆರ, ಪಾತಿಮಾ ಇಂದುಪುರ, ವಿಷ್ಣುಸಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.