ಮುಕೇಶ್ 
ನ್ಯೂಸ್

31ರಂದು ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಬಳ್ಳಿಗಾವಿ ಶ್ರೀ ಶಿವಶರಣರ ಮಾದಾರ ಚನ್ನಯ್ಯ ಜನ್ಮಸ್ಥಳ ಅಭಿವೃದ್ಧಿ ಸಮಿತಿಯಿಂದ ಮೇ 31ರಂದು ಪಟ್ಟಣದ ಗುರುಭವನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ವಿದ್ಯಾರ್ಥಿ ಸಂಘದ ಜಿಲ್ಲಾ ಸಂಚಾಲಕ ಮುಕೇಶ್ ಮತ್ತಿಕೋಟೆ ಹೇಳಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ತಜ್ಞ ಎಂ.ಸಿ.ಮೋಹನ್‌ಕುಮಾರ್ ದಾವಣಗೆರೆ, ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕ ನಾಗರಾಜ್ ಹರಿಜನ, ಉಪನ್ಯಾಸಕ ಡಾ. ಸೋಮಶೇಖರ್ ಶಿಮೊಗ್ಗಿ ಉಪನ್ಯಾಸ ನೀಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯ ವಿದ್ಯಾರ್ಥಿ ಸಂಘವು 25 ವರ್ಷಗಳಿಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದಿದೆ. ನಮ್ಮ ಸಂಘಟನೆಯನ್ನು ತಾಲೂಕಿನ ಪ್ರತಿ ಗ್ರಾಮಕ್ಕೂ ತಲುಪಿಸುವ ಗುರಿ ಹೊಂದಿದ್ದೇವೆ. ಹಿಂದುಳಿದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಮಾಜಿಕ, ಆಡಳಿತಾತ್ಮಕ ಮತ್ತು ಆರ್ಥಿಕವಾಗಿ ಉನ್ನತ ದರ್ಜೆಗೆ ತೆಗೆದುಕೊಂಡು ಹೋಗುವ ಗುರಿ ಹೊಂದಿದೆ ಎಂದು ಹೇಳಿದರು

ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಟಿ.ಸುರೇಶ್, ಪ್ರಮುಖರಾದ ಹೊಳೆಯಪ್ಪ, ಎಲ್.ಜಿ.ರತನ್, ಮಂಜುನಾಥ, ರಾಮಪ್ಪ, ಮಂಜುನಾಥ, ಮನೋಜ್‌ಕುಮಾರ್ ಇತರರಿದ್ದರು.