ನ್ಯೂಸ್

ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಎ. ಆರ್. ರಘುರಾಮ

ಸರಗೂರು: ನಗರೋತ್ಥಾನ ಯೋಜನೆ ಅನುದಾನದಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನುಪಪಂ ಮುಖ್ಯಾಧಿಕಾರಿ ಎಸ್. ಎಸ್. ಮಂಜುನಾಥ, ಅಧ್ಯಕ್ಷೆ ರಾಧಿಕಾ ಮತ್ತು ಸದಸ್ಯರು ಶನಿವಾರ ಪರಿಶೀಲಿಸಿದರು. ಪಟ್ಟಣದ 6 ಮತ್ತು 8 ನೇ ವಾರ್ಡಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಡೆಯುತ್ತಿರುವ ನಿರ್ಮಾಣ ಕೆಲಸಗಳನ್ನು ವೀಕ್ಷಿಸಿ, ನಿಗದಿ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪಪಂ ಮುಖ್ಯಾಧಿಕಾರಿ ಮಂಜುನಾಥ ಈ ಸಂದರ್ಭ ಮಾತನಾಡಿ, ಯಾವುದೇ ಮನೆಗಳಿಗೆಅಡಚಣೆಯಾಗದಂತೆ ಚರಂಡಿ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸಬೇಕು. ದೂರುಗಳು ಬಾರದಂತೆ ಗಮನ ಹರಿಸಬೇಕು. ಗುಣಮಟ್ಟ ಪಾಲನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಪಪಂ ಅಧ್ಯಕ್ಷೆ ರಾಧಿಕಾ ಮಾತನಾಡಿ, ಕಾಮಗಾರಿ ಬಗ್ಗೆ ಸಮಸ್ಯೆ ಇದ್ದರೆ ಚರ್ಚೆ ನಡೆಸಿ, ಸೀಮಿತ ಅವಧಿಯೊಳಗೆ ಪೂರ್ಣಗೊಳಿಸಲು ಗಮನಹರಸಿ ಎಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮು, ಪಪಂ ಸದಸ್ಯ ನೂರಳಾಸ್ವಾಮಿ, ಮುಖಂಡರಾದ ರಾಮಚಂದ್ರ, ಶ್ರೀನಾಥ, ಇಂಜಿನಿಯರ್ ಸುರೇಶ ಹಾಜರಿದ್ದರು.