ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಬಳಸಿದ್ದ ಪದವೊಂದನ್ನು ರಾಜ್ಯಸಭೆಯ ಕಡತದಿಂದ ತೆಗೆದು ಹಾಕಿದ ಅಪರೂಪದ ಪ್ರಸಂಗ ಗುರುವಾರ ನಡೆದಿದೆ.
ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್ಪಿಆರ್) ಸಂಬಂಧ ಮಾತನಾಡಿದ ಮೋದಿ, ಎನ್ಪಿಆರ್ ಬಗ್ಗೆ ಪ್ರತಿಪಕ್ಷಗಳು ‘ಸುಳ್ಳು’ ಹರಡುತ್ತಿವೆ ಎಂದು ಆಪಾದಿಸಿದ್ದರು. ಸುಳ್ಳು ಪದವನ್ನು ಕಡತದಿಂದ ತೆಗೆಯಲಾಯಿತು. ‘ಸುಳ್ಳು’ ಅಸಂಸದೀಯ ಪದವಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಪ್ರ
ತಿಪಕ್ಷ ನಾಯಕ ಕಾಂಗ್ರೆಸ್ನ ಗುಲಾಂ ನಬಿ ಆಜಾದ್ರ ಭಾಷಣದಿಂದಲೂ ಒಂದು ಪದವನ್ನು ತೆಗೆದು ಹಾಕಲಾಯಿತು. 2013ರಲ್ಲಿ ರಾಜ್ಯಸಭೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಬಳಸಿದ್ದ ಕೆಲ ಪದಗಳನ್ನೂ ಕಡತದಿಂದ ತೆಗೆಯಲಾಗಿತ್ತು.