ನ್ಯೂಸ್

ಸರ್ಕಾರಿ ವಸತಿಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ ಖಡಕ್ ಹೇಳಿಕೆ

ಬೆಂಗಳೂರು: ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಶುಕ್ರವಾರ ಎಂಟನೇ ಪತ್ರ ಬರೆದಿರುವೆ. ಹಿಂದಿನ ಸಭಾಪತಿಗೆ ಹಂಚಿಕೆ ಮಾಡಿದ್ದ ವಸತಿ ಗೃಹವನ್ನು ಕೊಡಬೇಕು. ಇಲ್ಲದಿದ್ದರೆ ಬೇಡ, ಸರ್ಕಾರಿ‌ ವಸತಿಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಖಡಕ್ ಆಗಿ‌ ಹೇಳಿದರು.

ವಿಧಾನ ಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಗಳ ಪೈಕಿ ಸಭಾಪತಿ ಹಾಗೂ ವಿಧಾನಸಭಾಧ್ಯಕ್ಷರು ಸೇರಿದ್ದು, ಸಭಾಪತಿ ಮತ್ತು ಸಭಾಧ್ಯಕ್ಷರಿಗೆ ನಿರ್ದಿಷ್ಟ ವಸತಿ ಗೃಹ ಗೊತ್ತುಪಡಿಸಬೇಕು ಎಂದು ಮುಖ್ಯಮಂತ್ರಿಗೆ ಜಂಟಿಯಾಗಿ ಪತ್ರ ಬರೆದಿದ್ದೇವೆ. ಹಿಂದಿನ ಸಭಾಪತಿಗಳಿಗೆ ಹಂಚಿಕೆ ಮಾಡಿದ್ದ ವಸತಿ ಗೃಹ ಕಾಯಂ ಆಗಿ ಗೊತ್ತುಪಡಿಸಲು ತಿಳಿಸಲಾಗಿದೆ. ಎಂಟನೇ ಬಾರಿಗೆ ಬರೆದಿರುವ ಕೊನೆಯ ಪತ್ರವಿದು. ವಸತಿ ಗೃಹ ಹಂಚಿಕೆ ಮಾಡಿ ಎಂದು ಭಿಕ್ಷೆ ಬೇಡಲಾಗದು ಎಂದು ಹೊರಟ್ಟಿ ಹೇಳಿದರು.