ನ್ಯೂಸ್

ಯಲ್ಲಮ್ಮದೇವಿ ಜೊತೆ ಬೆಂಗಳೂರಿನಿಂದ ಅಯೋಧ್ಯೆಗೆ ಮಹಿಳೆ ಯಾತ್ರೆ

women, yatra, malleshwaram, ayodhya

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮ ದೇವರ ಪ್ರಾಣಪ್ರತಿಷ್ಠೆ ನಂತರ ಯಾತ್ರಿಕರ ಸಂಖ್ಯೆ ಏರುತ್ತಿದೆ. ಭಕ್ತರು ಒಂದೊಂದು ರೀತಿಯಲ್ಲಿ ಹರಕೆ ಹೊತ್ತು ಹೋಗುತ್ತಿರುವುದನ್ನೂ ಕಾಣಬಹುದು. ಇದರ ಸಾಲಿಗೆ ಬೆಂಗಳೂರಿನ ಮಹಿಳೆಯೊಬ್ಬರು ಸೇರಿದ್ದಾರೆ. ವಿಶೇಷವೇನೆಂದರೆ ಅವರು ಮಲ್ಲೇಶ್ವರಂದಿಂದ ಅಯೋಧ್ಯೆಗೆ ಯಲ್ಲಮ್ಮದೇವಿ ವಿಗ್ರಹದ ಜತೆಗೆ ಯಾತ್ರೆ ಕೈಗೊಂಡಿರುವುದು.

ಮಾರುತಿ ವ್ಯಾನ್​ನಲ್ಲಿಯೇ ಅಯೋಧ್ಯೆ ಯಾತ್ರೆ ಹೊರಟಿರುವುದು ಎಲ್ಲರ ಗಮನ ಸೆಳೆದಿದೆ. ವ್ಯಾನ್‍ನಲ್ಲಿ ಯಲ್ಲಮ್ಮ ದೇವಿ ವಿಗ್ರಹ ಇರಿಸಿಕೊಂಡು ಮಹಿಳೆ ಅಯೋಧ್ಯೆಯಲ್ಲಿರುವ ಶ್ರೀರಾಮನ ದರ್ಶನಕ್ಕಾಗಿ ತೆರಳುತ್ತಿದ್ದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಭು ಶ್ರೀರಾಮನ ದರ್ಶನ ಪಡೆಯುವುದು ನನ್ನ ಗುರಿಯಾಗಿದ್ದು, ಎಷ್ಟೇ ಕಷ್ಟವಾದರೂ ಬಿಡುವುದಿಲ್ಲ. ಯಾತ್ರೆಯನ್ನು ಪೂರೈಸಿಯೇ ತೀರುತ್ತೇನೆ ಎಂದು ಅವರು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.