ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆಯರಾದ ಡಾ. ಎಚ್.ಟಿ.ನಿರ್ಮಲಾ, ಡಾ. ವಿಮಲಾ ಶೆಟ್ಟಿ, ಡಾ. ವಿಶಾಲಾಕ್ಷಿ ಮೂಗಿ, ಕಿರಿಯ ಆರೋಗ್ಯ ಸಹಾಯಕಿ ಎಚ್.ಜಿ.ರೂಪಾ, ಆಶಾ ಕಾರ್ಯಕರ್ತೆ ಬಿ.ಆರ್.ಭಾಗ್ಯ ಅವರನ್ನು ಸನ್ಮಾನಿಸಲಾಯಿತು. ವರ್ಗೀಸ್ ಪಿ. ಜಾನ್, ಡಾ. ಟಿ.ಎಸ್.ರೇಖಾ, ಡಾ. ರಶ್ಮಿ ವೈದ್ಯ, ಡಾ. ನಿವೇದಿತಾ ಹೆಗಡೆ, ಡಾ. ಆಶಾಶ್ರಿ ಉಪಾಧ್ಯ, ಡಾ. ಮಿಸ್ಬಾ ಎಚ್. ನಜಮ್, ಡಾ. ಎಚ್.ರಶ್ಮಿ , ಡಾ.ಟಿ.ಎಂ.ಸ್ಮಿತಾ, ಡಾ. ಕೆ.ಸುಜಾತಾ ಇದ್ದರು. 
ನ್ಯೂಸ್

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮಹಿಳಾ ದಿನಾಚರಣೆ

ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಿರ್ಮಲ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಎಚ್.ಟಿ.ನಿರ್ಮಲಾ, ಜ್ಯೋತಿ ಪಾಲಿಕ್ಲಿನಿಕ್ ಸ್ತ್ರೀರೋಗ ತಜ್ಞೆ ಡಾ. ವಿಮಲಾ ಶೆಟ್ಟಿ, ಶಿವಮೊಗ್ಗ ಐಎಂಎ ಮಹಿಳಾ ವೈದ್ಯರ ಘಟಕದ ಅಧ್ಯಕ್ಷೆ, ಸ್ತ್ರೀರೋಗ ತಜ್ಞೆ ಡಾ. ವಿಶಾಲಾಕ್ಷಿ ಮೂಗಿ, ಕೋಟೆ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿ ಎಚ್.ಜಿ.ರೂಪಾ ಹಾಗೂ ಆಶಾ ಕಾರ್ಯಕರ್ತೆ ಬಿ.ಆರ್.ಭಾಗ್ಯ ಅವರನ್ನು ಸನ್ಮಾನಿಸಲಾಯಿತು.

ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಕುಟುಂಬ ಮತ್ತು ಮಕ್ಕಳ ಕ್ಷೇಮಕ್ಕೆ ಆದ್ಯತೆ ಕೊಡುತ್ತಾರೆ. ಆದರೆ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಗಮನಕ್ಕೆ ತೆಗೆದುಕೊಳ್ಳುವುದು ಅಗತ್ಯ, ಇದರಿಂದ ಅವರು ತಮ್ಮ ಕುಟುಂಬದ ಜನರನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತು ತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಯಶಸ್ವಿಯಾಗಲು ಸಾಧ್ಯ, ಎಂದು ಸ್ತ್ರೀರೋಗ ತಜ್ಞೆ ಡಾ. ವಿಶಾಲಕ್ಷಿ ಮೂಗಿ ಹೇಳಿದರು.

ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ, ಕೆಲವೊಮ್ಮೆ ಪುರುಷರಿಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿದರೆ, ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯವಾಗದು. ಮಹಿಳೆಯರು ಆರೋಗ್ಯವಂತರಾಗಿದ್ದರೆ, ಅವರು ದೇಶವನ್ನೇ ಆಳುವ ಸಾಮರ್ಥ್ಯ ಹೊಂದಿರುತ್ತಾರೆ, ಎಂದು ತಿಳಿಸಿದರು. ಮಹಿಳಾ ದಿನಾಚರಣೆಯ ಮಹತ್ವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಮಹಿಳಾ ಹಕ್ಕುಗಳ ಮತ್ತು ಶಿಕ್ಷಣದ ಬಗ್ಗೆ ನಿರಂತರ ಜಾಗೃತಿಯ ಅಗತ್ಯವಿದೆ. ಶಿಕ್ಷಣದಿಂದ ಜ್ಞಾನ ಬರುತ್ತದೆ, ಮಹಿಳೆ ಶಿಕ್ಷಣ ಪಡೆದರೆ ಮಾತ್ರ ತನ್ನ ಹಕ್ಕುಗಳನ್ನು ಅರಿತುಕೊಳ್ಳಬಲ್ಲಳು ಎಂದರು.

ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಎಸ್‌ಎಂಎನ್‌ಎಚ್ ವೈದ್ಯಕೀಯ ಆಂಕೋಲೊಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ, ಮಹಿಳೆಯರು ಪ್ರತಿದಿನವೂ ಕನಿಷ್ಠ 30 ನಿಮಿಷ ವ್ಯಾಯಾಮಕ್ಕೆ ಮುಡಿಪಾಗಬೇಕೆಂದು ಸಲಹೆ ನೀಡಿದರು. ಅವರು ದಿನನಿತ್ಯದ ಕೆಲಸಗಳ ಕಾರಣಗಳನ್ನು ನೀಡದೆ, ಆರೋಗ್ಯಕ್ಕಾಗಿ ಕೆಲವು ಬದಲಾವಣೆಗಳನ್ನು ಅಥವಾ ಕೆಲವು ತ್ಯಾಗಗಳನ್ನು ಮಾಡಿ ಇದಕ್ಕಾಗಿ ಸಮಯ ಹೊಂದಿಸಬೇಕೆಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್, ಡಾ. ಟಿ.ಎಸ್.ರೇಖಾ, ಡಾ. ರಶ್ಮಿ ವೈದ್ಯ, ಡಾ. ನಿವೇದಿತಾ ಹೆಗಡೆ, ಡಾ. ಆಶಾಶ್ರಿ ಉಪಾಧ್ಯ, ಡಾ. ಮಿಸ್ಬಾ ಎಚ್. ನಜಮ್, ಡಾ. ಎಚ್.ರಶ್ಮಿ , ಡಾ.ಟಿ.ಎಂ.ಸ್ಮಿತಾ, ಡಾ. ಕೆ.ಸುಜಾತಾ, ಮಾರ್ಕೇಟಿಂಗ್ ಜನರಲ್ ಮ್ಯಾನೇಜರ್ ಎಸ್.ವಿ.ರಾಜಸಿಂಗ್, ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎನ್.ಶೈಲೇಶ್ ಸೇರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇನ್ನರ್ ವಿಲ್ಕ್ಲಬ್, ಜೆಸಿಐ ಕ್ಲಬ್, ಹೊಯ್ಸಳ ಕ್ಲಬ್, ಧರ್ಮಸ್ಥಳ ಸಂಘ, ಶಾಶ್ವತಿ ಮಹಿಳಾ ಸಂಘ, ಸಹ್ಯಾದ್ರಿ ಮಹಿಳಾ ಪಟ್ಟಣ ಬ್ಯಾಂಕ್ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.