ನ್ಯೂಸ್

ಭಿಕ್ಕುಗಳಿಗೆ ಹೆಣ್ಬಲೆ ಕೋಟಿ ಕೋಟಿ ಗಳಿಕೆ

ನವದೆಹಲಿ: ಬೌದ್ಧ ಸನ್ಯಾಸಿಗಳನ್ನು ಲೈಂಗಿಕ ಸಂಬಂಧಗಳಿಗೆ ಸೆಳೆದು ಅದನ್ನು ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್​ವೆುೕಲ್ ಮಾಡಿದ ಒಬ್ಬಳನ್ನು ಥಾಯ್ಲೆಂಡ್ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಚರ್ಯ ಕಾಪಾಡುವ ಪಣತೊಡುವ ಬೌದ್ಧ ಭಿಕ್ಕುಗಳು ಒಳಗೊಂಡಿರುವುದರಿಂದ ಇಡೀ ಹಗರಣ ಸಂಚಲನ ಮೂಡಿಸಿದ್ದು ಬೌದ್ಧ ಸಮುದಾಯ ಮುಜುಗರಕ್ಕೀಡಾಗಿದೆ. ಬಂಧಿತ ವಿಲಾವನ್ ಎಮ್​ಸ್ವಾತ್​ಳಿಂದ 80,000ಕ್ಕೂ ಅಧಿಕ ನಗ್ನ ಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಬ್ಲಾ್ಯಕ್​ವೆುೕಲ್​ನಿಂದ ಅವಳು 100 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿರುವುದನ್ನು ಬಹಿರಂಗ ಪಡಿಸಿದ್ದಾರೆ. ಹಗರಣದಲ್ಲಿ ಒಳಗೊಂಡ ಕನಿಷ್ಠ 9 ಬೌದ್ಧ ಮಠಾಧೀಶರು, ಹಿರಿಯ ಸನ್ಯಾಸಿಗಳನ್ನು ಸ್ಥಾನಚ್ಯುತಗೊಳಿಸಲಾಗಿದೆ ಎಂದು ರಾಯಲ್ ಥಾಯ್ ಪೊಲೀಸ್ ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

ಬ್ಯಾಂಕಾಕ್​ನಿಂದ ಉತ್ತರಕ್ಕಿರುವ ನೊಂಥಾಬುರಿಯಲ್ಲಿರುವ ಐಷಾರಾಮಿ ಮನೆಯಲ್ಲಿ 28 ವರ್ಷದ ಎಮ್​ಸ್ವಾತ್​​ಳನ್ನು ಬಂಧಿಸಲಾಗಿದೆ. ಆಕೆ ದರೋಡೆ, ಹಣಕಾಸು ಅಕ್ರಮ ವ್ಯವಹಾರ ಹಾಗೂ ಕದ್ದ ಮಾಲುಗಳನ್ನು ಪಡೆದ ಆರೋಪಗಳನ್ನು ಎದುರಿಸುತ್ತಿದ್ದಾಳೆ. ‘ಮಿಸ್ ಗಾಫ್’ ಎಂದು ಪೊಲೀಸರು ಉಲ್ಲೇಖಿಸುವ ಆಕೆ, ಕನಿಷ್ಠ 9 ಭಿಕ್ಕುಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇತರ ಬೌದ್ಧ ನಾಯಕರ ಜತೆ ಆಕೆ ಆಪ್ತವಾಗಿದ್ದ ಸಂದೇಶ-ವಿಡಿಯೋಗಳನ್ನು ಎಮ್​ಸ್ವಾತ್​​ಳ ಫೋನ್​ಗಳಿಂದ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೆದರಿಸಿ ಗಳಿಸಿದ ಹಣವನ್ನು ಆಕೆ ಕಾನೂನುಬಾಹಿರ ಆನ್​ಲೈನ್ ಗೇಮ್ಳಲ್ಲಿ ಹೂಡಿರುವುದನ್ನು ಕಂಡುಹಿಡಿದಿದ್ದಾರೆ. ಈಕೆ 3 ವರ್ಷಗಳಿಂದ ಈ ಕೃತ್ಯಗಳಲ್ಲಿದ್ದು, ಸನ್ಯಾಸಿಗಳ ಜತೆ ಲೈಂಗಿಕ ಕ್ರಿಯೆಯಲ್ಲಿದ್ದ 80,000ಕ್ಕೂ ಹೆಚ್ಚು ಫೋಟೋ-ವಿಡಿಯೋ ಸಿಕ್ಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.