ತಿರುವನಂತಪುರಂ: ಮಹಿಳೆಯೊಬ್ಬಳ ಆತ್ಮಹತ್ಯೆ ಪ್ರಕರಣದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೋಸ್ ಫ್ರಾಂಕ್ಲಿನ್ ( Jose Franklin ) ವಿರುದ್ಧ ಆರೋಪ ಕೇಳಿಬಂದ ನಂತರ, ಅಲ್ಲಿನ ಕಾಂಗ್ರೆಸ್ ಸರ್ಕಾರ ಭಾನುವಾರ (ಅ.19) ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಕೇರಳದ ಪೆರುಂಬಳುತೂರ್ ಬಳಿ ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನಲೆ ಜೋಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ ಎಂದು ನೆಯ್ಯಟ್ಟಿಂಕರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ಈ 10 ಟಿಪ್ಸ್ ಫಾಲೋ ಮಾಡಿ! ಮನೆ-ಮನಗಳ ಬೆಳಗುವ ಹಬ್ಬವನ್ನು ಸಂಭ್ರಮಿಸಿ..Deepavali
ಈ ಬೆಳವಣಿಗೆಯ ನಂತರ, ಕೆಪಿಸಿಸಿ ನಾಯಕನನ್ನು ಪಕ್ಷದಿಂದ ಅಮಾನತುಗೊಳಿಸಲು ಪಕ್ಷವು ನಿರ್ಧಾರ ಮಾಡಿತ್ತು. ಆದರಿಂದ ಫ್ರಾಂಕ್ಲಿನ್ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು.
ಮಹಿಳೆಯು ತನ್ನ ಮಗನಿಗಾಗಿ 2 ಪುಟದ ಪತ್ರವನ್ನು ಬರೆದಿದ್ದಳು. ಆಕೆಯು ಎದುರಿಸಿದ ದೌರ್ಜ್ಯವನ್ನು ವಿವರಿಸುತ್ತಾ, ಜೋಸ್ ಅಂಗಡಿಯಲ್ಲಿ ಪದೇ ಪದೇ ಲೈಂಗಿಕ ಬೇಡಿಕೆ ಇಟ್ಟಿದ್ದ ಹಾಗೇ ನನ್ನನ್ನು ಬದುಕಲು ಬಿಡಲು ನಿರಾಕರಿಸಿದ್ದ ಎಂದು ಆರೋಪಿಸಿದ್ದಾಳೆ.
ಸಾಲ ತೀರಿಸಲು ಜೋಸ್ನ ಸಹಾಯ ಕೇಳಿದಾಗ ಆತನು ತನ್ನ ಕಚೇರಿಗೆ ಕರೆಸಿಕೊಂಡು ಸಾಲ ತೀರಿಸುವುದಾಗಿ ಭರವಸೆ ನೀಡಿ, ಜೊತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ರೀತಿಯ ಸಹನೆಯಿಲ್ಲದೇ ಮುಂದೆ ಬದುಕಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುಂದಾಗಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಿಯ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಗಂಡ ಇಲ್ಲ, ಆದರೆ ಈ ರೀತಿಯಾಗಿ ಬದುಕಲು ಸಾಧ್ಯವಿಲ್ಲ. ಅವನು ನನ್ನನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಸಾಲದ ಬಗ್ಗೆ ವಿಚಾರಿಸಿದಾಗ, ಯಾವಾಗ ಬರುತ್ತೀಯಾ ನೀನು? ಯಾವಾಗ ನೋಡುತ್ತೇನೆ? ಕೆಳಗೆ ಬಾ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಪತ್ರದಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ. (ಏಜೆನ್ಸೀಸ್)