Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ಹಣ ಸೇರಿದಂತೆ ಎಲ್ಲ ರೀತಿಯ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರಂತೆ! ಹಾಗಾದರೆ, ಹುಟ್ಟಿನಿಂದಲೇ ರಾಣಿಯಂತೆ ಐಷಾರಾಮಿ ಜೀವನವನ್ನು ನಡೆಸುವ ಮಹಿಳೆಯರು ಯಾವ ರಾಶಿಯಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿಯ ಮಹಿಳೆಯರು ಧೈರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಅವರು ಎಂದಿಗೂ ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುವುದಿಲ್ಲ. ಅವರ ವಿಶಿಷ್ಟ ವ್ಯಕ್ತಿತ್ವವು ಇತರರು ತಮ್ಮನ್ನು ಪಾಲಿಸುವಂತೆ ಮಾಡುತ್ತದೆ. ವೃಷಭ ರಾಶಿಯ ಮಹಿಳೆಯರು ಸ್ವಾಭಾವಿಕವಾಗಿಯೇ ಹಣವನ್ನು ನಿರ್ವಹಿಸುವಲ್ಲಿ ನಿಪುಣರು. ಅವರು ತಮ್ಮ ಹಣವನ್ನು ದ್ವಿಗುಣಗೊಳಿಸುವ ಕಲೆಯನ್ನು ತಿಳಿದಿದ್ದಾರೆ. ಐಷಾರಾಮಿಗೆ ಹೆಚ್ಚು ಆಕರ್ಷಿತರಾದ ಈ ಜನರು ಹುಟ್ಟಿನಿಂದಲೇ ಎಲ್ಲ ರೀತಿಯ ಸಂಪತ್ತನ್ನು ಆಕರ್ಷಿಸುವಷ್ಟು ಅದೃಷ್ಟವಂತರು.
ಮಕರ ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಶಿಸ್ತುಬದ್ಧ ಮತ್ತು ಮಾನಸಿಕವಾಗಿ ಬಲಿಷ್ಠರಾಗಿರುತ್ತಾರೆ. ಅವರು ಖಂಡಿತವಾಗಿಯೂ ಎಲ್ಲ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹಣ ಉಳಿಸುವುದಕ್ಕೆ ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದಕ್ಕೆ ಹೆಸರುವಾಸಿಯಾಗಿರುತ್ತಾರೆ. ಇತರರನ್ನು ಸರಿಯಾಗಿ ಮುನ್ನಡೆಸಲು ಬೇಕಾದ ಎಲ್ಲ ನಾಯಕತ್ವದ ಗುಣಗಳನ್ನು ಇವರು ಹೊಂದಿರುತ್ತಾರೆ. ಇವರು ಸ್ವಾಭಾವಿಕವಾಗಿಯೇ ಇತರರನ್ನು ಸುಲಭವಾಗಿ ಮೋಡಿ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ರಾಣಿಯರಂತೆ ಕಾಣುತ್ತಾರೆ. ಇವರು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಮೇಷ ರಾಶಿಯ ಮಹಿಳೆಯರು ಅತ್ಯಂತ ಧೈರ್ಯಶಾಲಿಗಳು ಮತ್ತು ಸ್ವಾಭಾವಿಕವಾಗಿಯೇ ನಿಯಂತ್ರಣದ ಸ್ವಭಾವವನ್ನು ಹೊಂದಿರುತ್ತಾರೆ. ಅವರ ಆಕರ್ಷಕ ನೋಟ ಮತ್ತು ಹಣಕಾಸು ನಿರ್ವಹಣಾ ಕೌಶಲ್ಯಗಳು ಹೆಚ್ಚಾಗಿ ಅವರ ಜೀವನದಲ್ಲಿ ಉತ್ತಮ ಯಶಸ್ಸಿಗೆ ಕಾರಣವಾಗುತ್ತವೆ. ಮೇಷ ರಾಶಿಯ ಮಹಿಳೆಯರು ಸಾಮಾನ್ಯವಾಗಿ ನಿಜವಾದ ರಾಣಿಯರಂತೆ ಬದುಕುತ್ತಾರೆ ಏಕೆಂದರೆ, ಅವರು ತಮಗೆ ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರಿಗೂ ಸಕಾರಾತ್ಮಕ ಶಕ್ತಿಯನ್ನು ಹರಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.