ನ್ಯೂಸ್

ಸಾಯುವ ಸ್ಥಿತಿಯಲ್ಲೂ ಮಗುವಿಗೆ ಜನ್ಮ ನೀಡಿದಳು; ಮೆದುಳು ನಿಷ್ಕ್ರಿಯಗೊಂಡ ಈಕೆಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು ಮಾತ್ರವಲ್ಲದೆ, ಅಂಗಾಂಗಗಳನ್ನು ದಾನ ಮಾಡಿ ಇತರರ ಪ್ರಾಣ ಉಳಿಸಿದ್ದಾರೆ. ಹೈದರಾಬಾದ್​​ನಲ್ಲಿ ಈ ಘಟನೆ ನಡೆದಿದೆ.

ಮಡ್ಡಿಕಟ್ಲ ಸುನೀತಾ ಎಂಬ 27 ವರ್ಷದ ಯುವತಿ ಜೂನ್ 8 ರಂದು ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಳು.ಅದೇ ವೇಳೆ ಹಿಂದಿನಿಂದ ಬಂದ ಆಟೋ ಇವರಿಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಸುನೀತಾ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸುನೀತಾ ಆಗಲೇ 9 ತಿಂಗಳ ಗರ್ಭಿಣಿಯಾಗಿದ್ದಳು. ಸುನಿತಾಗೆ ತೀವ್ರವಾದ ಗಾಯದಿಂದಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಲಾಗಿತ್ತು. ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ. ಚಿಕಿತ್ಸೆ ವೇಳೆ ಸುನೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಸುನೀತಾ ಆರೋಗ್ಯದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ವೈದ್ಯರು ಮಾತನಾಡಿ, ಸುನಿತಾ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಇದರಿಂದ ಏನು ಮಾಡುವುದು ಅಥವಾ ಆಸ್ಪತ್ರೆಯಲ್ಲಿ ಜೀವಂದನ ಸಂಯೋಜಕರು ನಡೆಸಿದ ಕೌನ್ಸೆಲಿಂಗ್ ಬಳಿಕ ಸುನಿತಾ ಅವರ ಅಂಗಾಂಗಗಳನ್ನು ದಾನ ಮಾಡಲು ಸುನೀತಾ ಅವರ ಪತಿ ಹಾಗೂ ಕುಂಟುಬಸ್ಥರು ಮುಂದಾಗಿದ್ದಾರೆ. ಇಬ್ಬರಿಗೆ ಯಕೃತ್ತು ಮತ್ತು ಮೂತ್ರದ ಭ್ರೂಣಗಳನ್ನು ನೀಡಲಾಯಿತು. ಸುನೀತಾ ಸಾಯುತ್ತಿದ್ದರೂ ಕೆಲವು ಜೀವಗಳನ್ನು ಉಳಿಸಿದಳು ಎಂದಿದ್ದಾರೆ.