ನ್ಯೂಸ್

ವಿಷಪೂರಿತ, ಅಪಾಯಕಾರಿ ಹಾವುಗಳೊಂದಿಗೆ ಸಿಕ್ಕಿಬಿದ್ದ ಮಹಿಳೆಯರು! | Dangerous Snakes

ಹೈದರಾಬಾದ್​: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ(ನ.24) ತಡರಾತ್ರಿ ವಿದೇಶಿಯ ಇಬ್ಬರು ಮಹಿಳೆಯರ ಬ್ಯಾಗ್​ನಲ್ಲಿ ಎರಡು ಹಾವುಗಳು(Dangerous Snakes) ಪತ್ತೆಯಾಗಿದ್ದು, ಕೆಲ ಕಾಲ ಆತಂಕದ ವಾತಾರಣ ಸೃಷ್ಠಿಯಾಗಿತ್ತು.

ಹೌದು, ಬ್ಯಾಂಕಾಕ್​ನ ಇಬ್ಬರು ಮಹಿಳೆಯರು ತಮ್ಮೊಂದಿಗೆ ಸಾಗಿಸುತ್ತಿದ್ದ ಎರಡು ಹಾವುಗಳನ್ನು ರಕ್ಷಿಸುವುದರ ಜತೆಗೆ ಇಬ್ಬರನ್ನು ಇಲ್ಲಿನ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್​ನಿಂದ ನೇರವಾಗಿ ವಿಮಾನ ನಿಲ್ದಾಣದಲ್ಲಿ ಇಳಿದ ಮಹಿಳೆಯರು ತಮ್ಮ ಬ್ಯಾಗ್​ನ ಬುಟ್ಟಿಯಲ್ಲಿ ಹಾವು ತಂದಿದ್ದಾರೆ. ಇದನ್ನು ಪ್ರಶ್ನಿಸಿ, ಅನುಮಾನದ ಮೇಲೆ ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಕಳ್ಳಸಾಗಣಿಕೆ ಎಂದು ಕಾಣಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹಾವುಗಳನ್ನು ಮೃಗಾಲದ ಅಧಿಕಾರಿಗಳಿಗೆ ಒಪ್ಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಇವರ ಬಂಧನ ಮಾಡಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಈ ಘಟನೆಯೂ ಅಪಾಯಕಾರಿ ಪ್ರಾಣಿಗಳನ್ನು ವಿಮಾನದ ಮೂಲಕ ಭಾರತಕ್ಕೆ ಕಳ್ಳಸಾಗಣಿಕೆ ಮಾಡುವ ಪ್ರವೃತ್ತಿ ಮುಂದುವರಿಯುತ್ತಿದೆ ಎಂದು ಪ್ರಾಣಿ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ, ಅಕ್ಟೋಬರ್​ನಲ್ಲಿ ಚೈನ್ನೈನ ವಿಮಾನ ನಿಲ್ದಾಣದಲ್ಲಿ ವಿವಿಧ ವಿದೇಶಿಗರಿಂದ ಬರೊಬ್ಬರಿ 56 ಅಪಾಯಕಾರಿ ಪ್ರಾಣಿಗಳ ವಶಪಡಿಸಿಕೊಂಡು ವಿದೇಶಿಗರನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ, (ಏಜೆನ್ಸೀಸ್​).