ನ್ಯೂಸ್

ಸಾರ್ವಜನಿಕ ಸ್ಥಳದಲ್ಲಿ ಸೊಂಟ ಬಳುಕಿಸಿದ ಮಹಿಳೆ! ಈ ರೋಗ ಇಲ್ಲಿಗೂ ಬಂತಾ… ನೆಟ್ಟಿಗರಿಂದ ಛೀಮಾರಿ

ಇತ್ತೀಚಿನ ದಿನಗಳಲ್ಲಿ ಬೀದಿ ಬೀದಿಗಳಲ್ಲಿ ರೀಲ್ಸ್​​ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಸಾರ್ವಜನಿಕರು ಓಡಾಡುವ ಸ್ಥಳಗಳಾದ ರೈಲು, ಬಸ್​ ನಿಲ್ದಾಣ, ಮೆಟ್ರೋ ಹೀಗೆ ಎಲ್ಲಿ ನೋಡಿದರೂ ಸ್ಮಾರ್ಟ್​ಫೋನ್​ ಹಿಡಿದು ರೀಲ್ಸ್​ ವಿಡಿಯೋ ಮಾಡುತ್ತಿರುತ್ತಾರೆ. ಇದು ಇತರರಿಗೆ ತೀವ್ರ ಮುಜುಗರ ಉಂಟು ಮಾಡುತ್ತದೆ ಎಂಬ ಕಿಂಚಿತ್ತು ಯೋಚನೆಯಿಲ್ಲದ ಯುವಜನತೆ, ಈ ಕೆಲಸದಲ್ಲಿ ತುಂಬ ಬ್ಯುಸಿಯಾಗಿದ್ದಾರೆ. ರೀಲ್​​ ಮಾಡುವವರ ಪೈಕಿ ಯುವತಿ, ಮಹಿಳೆಯರೇ ಮೇಲುಗೈ.

ಸಾರ್ವಜನಿಕರು ಸಂಚರಿಸುವ ಜಾಗಗಳಲ್ಲಿ ಮೊಬೈಲ್ ಹಿಡಿಯುವ ಮಹಿಳೆಯರು, ತಮ್ಮ ಮನಸಿಗೆ ಬಂದಂತೆ ಕುಣಿದು ಕುಪ್ಪಳಿಸುತ್ತಾರೆ. ಸದ್ಯ ಈ ಸಾಲಿಗೆ ಇಲ್ಲೊಬ್ಬಳು ಮಹಿಳೆಯ ಬೆಲ್ಲಿ ಡ್ಯಾನ್ಸ್​ ವಿಡಿಯೋ ಸೇರ್ಪಡೆಗೊಂಡಿದ್ದು, ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಹೊರಗೆ ಮಹಿಳೆಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಾರ್ವಜನಿಕರ ಮಧ್ಯೆ ನಡೆಯುವ ಈ ಬೆಲ್ಲಿ ಡ್ಯಾನ್ಸ್​ ವಿಡಿಯೋ ನೋಡಿದ ನೆಟ್ಟಿಗರು ಮಹಿಳೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಪಬ್ಲಿಕ್​ನಲ್ಲಿ ಯಾಕೆ ಈ ರೀತಿ ನಡೆದುಕೊಳ್ಳುತ್ತೀರಿ, ಇತರರನ್ನು ಮುಜುಗರಕ್ಕೀಡುಮಾಡುತ್ತೀರಿ ಎಂದು ವ್ಯಾಪಕವಾಗಿ ಟೀಕಿಸಿದ್ದಾರೆ. ದೃಶ್ಯದಲ್ಲಿ ಮಹಿಳೆ ಹಳದಿ ಬಣ್ಣದ ಉಡುಗೆಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು.

ಇಂಥವರಿಂದ ನಗರದಲ್ಲಿ ಪಾದಚಾರಿಗಳಿಗೆ ಫುಟ್‌ಪಾತ್‌ಗಳು ಮುಕ್ತವಾಗಿರಲು ಸಾಧ್ಯವೇ ಇಲ್ಲ. ಈ ರೋಗ ಈಗ ಮುಂಬೈಗೂ ಆವರಿಸಿತೇ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮಹಿಳೆಯ ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).