ನ್ಯೂಸ್

ಜುಗಾರಿ ಅಡ್ಡೆ, ಮದ್ಯಪಾನಿಗಳ ಫೇವರಿಟ್​ ಸ್ಪಾಟ್​ಗಳಿಗೆ ಮಹಿಳೆಯರಿಂದ ದಾಳಿ!

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಪಟ್ಟಣದಲ್ಲಿ ಮಂಗಳವಾರ ಮಹಿಳೆಯರ ಗುಂಪೊಂದು ಜೂಜಾಟದ ಅಡ್ಡೆಗಳು ಮತ್ತು ಮದ್ಯದ ಜಾಯಿಂಟ್‌ಗಳನ್ನು ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ರಾಜಕೀಯ ಪಕ್ಷವೊಂದರ ಸದಸ್ಯರು ಎಂದು ಹೇಳಲಾದ ಮಹಿಳೆಯರು, ಜೂಜಾಟದ ಅಡ್ಡೆಗಳು ಮತ್ತು ಮದ್ಯದ ಜಾಯಿಂಟ್‌ಗಳ ವಿರುದ್ಧ ತಮ್ಮ ದೂರುಗಳ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ ಆದ್ದರಿಂದ ಈ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಲು ತಾವೇ ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಉಲ್ಲಾಸನಗರ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)