ಕೋಲಾರ ತಾಲೂಕಿನ ಕಡಗಟ್ಟೂರು ಎಸ್​ಎ್​ಸಿಎಸ್​ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಲಾನುಭವಿಗಳಿಗೆ ಸಂದ ಅಧ್ಯಕ್ಷ ಕೆ.ವಿ.ದಯಾನಂದ ಸಾಲದ ಚೆಕ್​ ವಿತರಿಸಿದರು. ಮಂಜುನಾಥ್​, ಡೇವಿಡ್​, ಮುನಿಶ್ವರಪ್ಪ, ರಾಜಣ್ಣ ಇದ್ದರು. 
ನ್ಯೂಸ್

ಮಹಿಳೆಯರು, ರೈತರೇ ಸಹಕಾರಿ ಬ್ಯಾಂಕ್​ಗಳ ಶಕ್ತಿ

ಕೋಲಾರ: ರೈತರು ವದಂತಿಗಳಿಗೆ ಕಿವಿಗೋಡದೆ ಪಡೆದುಕೊಂಡಿರುವ ಸಾಲವನ್ನು ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕು. ಜತೆಗೆ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕು, ರೈತರು, ಮಹಿಳೆಯರು ಸಹಕಾರ ಸಂಗಳ ಶಕ್ತಿ ಎಂದು ಕಡಗಟ್ಟೂರು ಎಸ್​ಎ್​ಸಿಎಸ್​ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಕೆ.ವಿ.ದಯಾನಂದ್​ ಬಣ್ಣಿಸಿದರು.

ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವ ಸಹಕಾರ ಸಂದಿಂದ ಗುರುವಾರ ಸಂದ ಆವರಣದಲ್ಲಿ ಹಮ್ಮಿಕೊಂಡಿದ್ದ 156 ಮಂದಿ ರೈತರಿಗೆ 1,41,76000 ರೂ. ಸಾಲ ವಿತರಣಾ ಸಮಾರಭದಲ್ಲಿ ಫಲಾನುಭವಿಗಳಿಗೆ ಸಾಲದ ಚೆಕ್​ ವಿತರಿಸಿ ಮಾತನಾಡಿದರು.
ಕಡಗಟ್ಟೂರು ಸೋಸೈಟಿಯು ಇತರೆ ಬ್ಯಾಂಕ್​ಗಳಿಂತ ಮಾದರಿಯಾಗಿ ವಹಿವಾಟು ನಡೆಸುತ್ತಿದೆ. ರೈತರಿಗೆ, ಮಹಿಳಾ ಸಂಗಳಿಗೆ ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿಲ್ಲ. ಆದ್ದರಿಂದಲೇ ಆರ್ಥಿಕವಾಗಿ ಶಕ್ತಿಹೊಂದಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುತ್ತಿದೆ ಎಂದರು.
ಸಂಘದಿಂದ ಪಡೆದುಕೊಂಡಿರುವ ಸಾಲವನ್ನು ರೈತರು, ಮಹಿಳೆಯರು ಪ್ರಮಾಣಿಕವಾಗಿ ಮರು ಪಾವತಿ ಮಾಡುತ್ತಿರುವುದರಿಂದ ವಿವಿಧ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ. ಸಂಘಗಳಿಂದ ಸಾಲ ನೀಡಲು ಸರ್ಕಾರ ಹಣ ನೀಡುತ್ತದೆ ಎಂಬುದು ತಪು$್ಪ ಕಲ್ಪನೆ. ರಿಸರ್ವ್​ ಬ್ಯಾಂಕಿನಿಂದ ನಬಾರ್ಡ್​, ನಬಾರ್ಡ್​ನಿಂದ ಅಪೆಕ್ಸ್​ ಬ್ಯಾಂಕ್​, ಅಪೆಕ್ಸ್​ನಿಂದ ಡಿಸಿಸಿ ಬ್ಯಾಂಕಿಗೆ ಸಾಲ ಬರುತ್ತದೆ. ಡಿಸಿಸಿ ಬ್ಯಾಂಕಿನಿಂದ ಸಂಗಳು ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತದೆ. ಡಿಸಿಸಿ ಬ್ಯಾಂಕಿಗೆ ಬಡ್ಡಿ ಪಾವತಿ ಮಾಡಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಸಕಾಲಕ್ಕೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಆಡಳಿತಾಧಿಕಾರಿ ಇರುವುದರಿಂದ ಸಾಲ ನೀಡಲು ಅಸಕ್ತಿ ತೋರುತ್ತಿಲ್ಲ. ಅಧಿಕಾರಿಗಳು ಸಾಲ ವಸೂಲಿಗೆ ಮುಂದಾಗುತ್ತಿಲ್ಲ. ಸಂಬಂಳಕ್ಕೆ ಸಿಮೀತರಾಗಿದ್ದಾರೆ. ಅಧಿಕಾರಿಗಳು ಬೆಂಗಳೂರಿನಿಂದ ಬಂದು ಹೋಗುವುದರಿಂದ ರೈತರ ಬಗ್ಗೆ ಕಾಲಜಿಯಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂದ ಉಪಾಧ್ಯಕ್ಷ ಡೇವಿಡ್​, ನಿರ್ದೇಶಕ ರಾಜಣ್ಣ, ರಮೇಶ್​, ರಾಮಾಂಜಿನಲ್ಲ, ಸುಬ್ರಮಣಿ ಮಂಜುನಾಥ್​, ಸಿಇಒ ಮುನೀಶ್ವರಪ್ಪ ಇತರರಿದ್ದರು.

ಸ್ಥಳದಲ್ಲೇ 61 ಲಕ್ಷ ಠೇವಣಿ ಸಂಗಹ್ರ
ಸಮಾರಂಭದಲ್ಲೇ 61 ಲಕ್ಷ ರೂ. ಠೇವಣಿ ಸಂಗ್ರವಾಗಿದ್ದು, ಆ ಪೈಕಿ ಮಚಂಡಹಳ್ಳಿ ಮಂಜುನಾಥ್​ 10 ಲಕ್ಷ, ಕಡಗಟ್ಟೂರು ದಯಾನಂದ್​ 20 ಲಕ್ಷ, ಕೆ.ಎಸ್​.ವರುಣಾ 2 ಲಕ್ಷ, ಡೇವಿಡ್​ 20 ಲಕ್ಷ, ಬೈರಪ್ಪ 80 ಸಾವಿರ, ಮುನಿರಾಜು 1 ಲಕ್ಷ ಠೇವಣಿ ಮಾಡಿದರು.