ನ್ಯೂಸ್

ದಿಲ್ಲಿ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ: ಸರಣಿ ಟ್ವೀಟ್​ ಮೂಲಕ ನೋವು ತೋಡಿಕೊಂಡ ಮಹಿಳೆ

mahalakshmihm

ನವದೆಹಲಿ: ದಿಲ್ಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯೊಬ್ಬಳು ಸರಣಿ ಟ್ವೀಟ್​ ಮೂಲಕ ಘಟನೆಯನ್ನು ವಿವರಿಸಿದ್ದಾರೆ. ಹಳದಿ ಮಾರ್ಗದ ಜೊರ್​​ ಬಾಗ್​ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದಾರಿ ಕೇಳುವ ನೆಪದಲ್ಲಿ ಬಂದ ವ್ಯಕ್ತಿ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟು ಜನರಿರುವ ಫ್ಲಾಟ್​​ಫಾರಂನಲ್ಲೇ ಈ ಕೃತ್ಯವೆಸಗಿದ್ದಾನೆ. ಈತನನ್ನು ಸುಮ್ಮನೆ ಬಿಡಬಾರದು ಎಂದು ಹೇಳಿಕೊಂಡಿದ್ದಾರೆ.

ಅದ್ವಿತಾ ಕಪೂರ್​ ಎಂಬ ಮಹಿಳೆ ಎಂದಿನಂತೆ ಗುರುವಾರವೂ ಮೆಟ್ರೋ ನಿಲ್ದಾಣಕ್ಕೆ ಬಂದು, ಮೆಟ್ರೋದಲ್ಲಿ ಸಂಚರಿಸುವಾಗಲೂ ವಿಳಾಸ ಕೇಳಿದ್ದಾನೆ. ತದನಂತರ ಇಳಿದು ಕ್ಯಾಬ್​ ಬುಕ್​ ಮಾಡಲು ಫ್ಲಾಟ್​​ಫಾರಂನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಎದುರಿಗೆ ಬಂದ ಈತ, ತನ್ನ ಖಾಸಗಿ ಅಂಗವನ್ನು ತೋರಿಸಿದ್ದಾನೆ. ನಾನು ಭಯದಿಂದ ಅಲ್ಲಿಂದ ಓಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ದಿಲ್ಲಿ ಮೆಟ್ರೋ ಅಧಿಕಾರಿಗಳು ನಿಖರವಾದ ಸಮಯವನ್ನು ಕೇಳಿದ್ದಾರೆ. ಇಷ್ಟು ದೂರು ನೀಡಿದರೂ ಕ್ರಮ ಕೈಗೊಳ್ಳದಿರುವುದು ಸರಿಯಿಲ್ಲ ಎಂದು ಮಹಿಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. (ಏಜೆನ್ಸೀಸ್​)