ನ್ಯೂಸ್

ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​

ಲಂಡನ್​: ಸೆಕ್ಸ್​ ಮಾಡುವಾಗ ಹಂದಿ ಕಿರುಚುವಂತೆ ಕಿರುಚುತ್ತೀಯ ಎಂದು ನೆರೆಮನೆಯವರೊಬ್ಬರು ಅವಮಾನ ಮಾಡಿದ ಘಟನೆಯನ್ನು ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಹೆಸರೇಳಲು ಇಚ್ಛಿಸದ ಮಹಿಳೆಯನ್ನು ಯುನೈಟೆಡ್​ ಕಿಂಗ್​ಡಮ್​ ನಿವಾಸಿ ಎಂದು ಗುರುತಿಸಲಾಗಿದೆ. ರಾತ್ರಿಯ ಸರಸ ಸಲ್ಲಾಪ ಮುಗಿದ ಮಾರನೇ ದಿನ ನೆರೆಮನೆಯವರಿಂದ ಪತ್ರವೊಂದನ್ನು ಸ್ವೀಕರಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಪತ್ರವನ್ನು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಸೆಕ್ಸ್​ ಮಾಡುವಾಗ ಹಂದಿಯಂತೆ ಕಿರುಚುವುದನ್ನು ನಿಲ್ಲಿಸಲು ಆಗುತ್ತಾ ಎಂದು ನೆರೆಮನೆಯವರು ಪ್ರಶ್ನಿಸಿದ್ದಾರೆ. ಕಿರುಚುವುದರಿಂದ ನಾವೆಲ್ಲರೂ ಅನಾರೋಗ್ಯಕ್ಕೆ ಒಳಗಾಗಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಯಾವುದೇ ಅಳುಕಿಲ್ಲದೆ ಪತ್ರವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಮಹಿಳೆ, ನಾನು ಗಿಡಮೂಲಿಕೆಗಳ ಸಾರದಂತೆ ಧ್ವನಿ ಮಾಡುತ್ತಿದ್ದೇನೆಂದು ವೈಯಕ್ತಿಕವಾಗಿ ಅಂದುಕೊಂಡಿದ್ದೆ. ಆದರೆ, ನಾನು ಭಾವಿಸಿದಕ್ಕಿಂತ ಘೋರವಾಗಿದೆ ಎಂದು ನೆರೆಮನೆಯವರು ಹೇಳುತ್ತಿದ್ದಾರೆಂದು ಮಹಿಳೆ ತಿಳಿಸಿದ್ದಾಳೆ.

ಟ್ವಿಟರ್​ನಲ್ಲಿ ಪತ್ರವನ್ನು ಶೇರ್​ ಮಾಡಿದಾಗಿನಿಂದ 21 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿದ್ದು, 1 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಆಗಿವೆ. ಅಲ್ಲದೆ, ಮಹಿಳೆಯನ್ನು ಬೆಂಬಲಿಸಿ ಡಜನ್​...ಡಜನ್​ ಕಾಮೆಂಟ್​ಗಳು ಸಹ ಹರಿದುಬರುತ್ತಿವೆ.

ಪತ್ರ ಬರೆದವರಿಗೆ ಕನಿಷ್ಠ ಪಕ್ಷ ಸದಾಚಾರವಿದೆಯೇ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದರೆ, ಇನ್ನೊಬ್ಬರು, ನಾನು ಒಮ್ಮೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದೆ. ಕೆಳಗಡೆ ನನ್ನ ನೆರೆಹೊರೆಯವರು ಲೈಂಗಿಕ ಸಮಯದಲ್ಲಿ ಬ್ರೂಮ್ ಹ್ಯಾಂಡಲ್‌ನಿಂದ ನನ್ನ ಚಾವಣಿಯ ಮೇಲೆ ಹೊಡೆಯುತ್ತಿದ್ದರು. ನಾನು ನಗಲು ಪ್ರಯತ್ನಿಸಿದೆ ಆದರೆ ಅದು ನನ್ನ ಜೀವನವನ್ನು ಶೋಚನೀಯಗೊಳಿಸಿತು ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಹೊಟ್ಟೆಕಿಚ್ಚಿನ ನೆರೆಯವರು ಎಂದು ಜರಿದಿದ್ದಾನೆ. ಇನ್ನೋರ್ವ ತನಗೂ ಇದೇ ರೀತಿಯ ಅನುಭವ ಹಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ ನೆರೆಯವರು ಬರೆದ ಪತ್ರದಿಂದ ತುಂಬಾ ಮುಜುಗರ ಅನುಭವಿಸಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಈ ವಿಚಾರದ ಬಗ್ಗೆ ನಾನೆಷ್ಟೇ ಹಾಸ್ಯ ಮಾಡಿದರೂ ನನಗೆ ಇದರಿಂದ ನರಕದ ಅನುಭವವಾಯಿತು ಎಂದಿದ್ದಾರೆ. (ಏಜೆನ್ಸೀಸ್​)