ಲೆಕ್ಕವಿಲ್ಲದಷ್ಟು ಸೆಲ್ಫಿ ತೆಗೆಯುವುದು, ರೀಲ್ಸ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳಿದ್ದರು ಜನರ ಬಳಿ ಅದಕ್ಕೆ ಕಿಮ್ಮತ್ತಿಲ್ಲ. ಇಂತಹದ್ದೆ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದರಲ್ಲಿ ವಿಡಿಯೋ ಮಾಡುವವರಿಗೆ ಅಪಾಯವಿಲ್ಲ, ಬದಲಿಗೆ ಏನು ಅರಿಯದ ಕಂದನಿಗೆ ಅಪಾಯ ಇರುವುದು ಕಾಣುತ್ತಿದೆ.
ಇದನ್ನು ಓದಿ: ಸ್ಕೂಟಿ ಜತೆಗೆ ಫ್ಲೈಓವರ್ ಪಿಲ್ಲರ್ ಮೇಲೆ ಲ್ಯಾಂಡಿಂಗ್; ಅದೃಷ್ಟವಶಾತ್ ಹುಡುಗಿ ಪಾರಾಗಿದ್ದೇಗೆ ಗೊತ್ತಾ?
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಾವಿಯ ಅಂಚಿನಲ್ಲಿ ಕುಳಿತು ಹಾಡಿಗೆ ಲಿಪ್ ಸಿಂಕ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಒಂದು ಚಿಕ್ಕ ಮಗುವನ್ನು ತನ್ನ ಕಾಲಿನ ಬಳಿ ನೇತಾಕಿಕೊಂಡಿರುವುದು ಕಂಡುಬರುತ್ತದೆ. ಆಕೆ ಬಾವಿಯ ಅಂಚಿನಲ್ಲಿ ಕುಳಿತಿದ್ದರೆ ತೆರೆದ ಬಾವಿಯೊಳಗೆ ಮಹಿಳೆ ಕಾಲಿನಲ್ಲಿ ಗಾಲಿಗೆ ನೇತಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡಿರುವವರು ಕಸ್ಟಡಿ ಕೇಸ್ನಲ್ಲಿ ತಂದೆಗಿಂತ ತಾಯಿ ಮಗುವನ್ನು ಹೆಚ್ಚು ಕಾಳಜಿವಹಿಸುತ್ತಾರೆ ಎಂದು ಹೇಳುತ್ತಾರೆ ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿರುವ ಮಹಿಳೆ, ಆ ಸ್ಥಳ ಮತ್ತು ಗುರುತು ಪತ್ತೆಯಾಗಿಲ್ಲ. ಮಹಿಳೆ ಮತ್ತು ಹುಡುಗನ ನಡುವಿನ ಸಂಬಂಧ ಏನೆಂಬುದು ಇನ್ನೂ ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಜಾಗರೂಕ, ಅನಗತ್ಯ ಮತ್ತು ಅರ್ಥಹೀನ. ಮಗುವಿನ ಪ್ರಾಣಕ್ಕೆ ಅಪಾಯ ತಂದೊಡ್ಡಿರುವ ಆ ಮಹಿಳೆಯನ್ನು ಬಂಧಿಸಬೇಕು. ಮಾನಸಿಕ ಆಸ್ಪತ್ರೆ ಬಳಿಕ ಆಕೆ ಕೆಲವು ದಿನಗಳು ಜೈಲಿನಲ್ಲಿರಬೇಕು. ಆಕೆಗೆ ಚಿಕಿತ್ಸೆ ಅಗತ್ಯವಿದೆ. ಕಾನೂನನ್ನು ದೂಷಿಸಬೇಡಿ ಅವಳು ಮಾನಸಿಕ ರೋಗಿ, ರೀಲ್ಸ್ಗಳು ಮಾನವನ ಮೆದುಳನ್ನು ನಾಶಪಡಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.