ನ್ಯೂಸ್

ಪ್ರಾಣ ಬಿಟ್ಟಳು 22ರ ಗೃಹಿಣಿ! ಹತ್ಯೆಯ ಆರೋಪ ಮಾಡಿದ ಹೆಣ್ಣಿನ ಮನೆಯವರು...

ದೇವನಹಳ್ಳಿ: ಇಲ್ಲೊಬ್ಬ ಯುವತಿ ಪ್ರೀತಿಸಿ ಮದುವೆಯಾಗಿದ್ದು ಒಂದುವರೆ ವರ್ಷದ ನಂತರ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗೃಹಿಣಿಯ ಮನೆಯವರು ಗಂಡಿನ ಕಡೆಯವರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಗೃಹಿಣಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಆತ್ಮಹತ್ಯೆಗೆ ಕಾರಣವೇನು?

ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಟ್ಟೆಇಂದೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮೇಘನಾ (22) ಎಂದು ಗುರುತಿಸಲಾಗಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಮೇಘನಾ ಹಾಗೂ ಆಕೆಯ ಪತಿ ನಾಗೇಶ ಪ್ರೀತಿಸಿ ಮದುವೆಯಾಗಿದ್ದರು. ಅದ್ಯಾಕೋ ಗೊತ್ತಿಲ್ಲ, ರಾತ್ರಿ ದಂಪತಿಗಳ ನಡುವೆ ಊಟದ ವಿಚಾರಕ್ಕೆ ಜಗಳ ನಡೆದಿದೆ. ನಂತರ ಗೃಹಿಣಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಗಂಡನ ಪ್ರಕಾರ ಪತ್ನಿ/ಗೃಹಿಣಿ ಪ್ರಾಣ ಬಿಟ್ಟದ್ದು ಯಾಕೆ?

ಆದ್ರೆ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಈಕೆಯ ಪತಿ ನಾಗೇಶ ಹೇಳುತ್ತಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.