ನ್ಯೂಸ್

ಹೆಣ್ಣು ಮಗು ಬೇಕು ಎಂಬ ಆಸೆಗೆ 9 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಕೊನೆಗೂ ಈಕೆ ಆಸೆ ಫಲಿಸಿತು..

ನವದೆಹಲಿ: ಕೆಲವು ಪ್ರದೇಶಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಶಾಪವೆಂದು ಪರಿಗಣಿಸಲಾಗುತ್ತದೆ. ಇವತ್ತಿಗೂ ಹೆಣ್ಣು ಹುಟ್ಟಿದಾಗ ದುಖಃ, ಮಗ ಹುಟ್ಟಿದಾಗ ಖುಷಿ ಪಡುವ ಜನ ಬಹಳ ಜನ ಇದ್ದಾರೆ. ಮಗನನ್ನು ಹೊಂದುವ ಭರವಸೆಯಲ್ಲಿ ನಾಲ್ಕೈದು ಅಥವಾ ಅದಕ್ಕಿಂತ ಹೆಚ್ಚು ಹೆಣ್ಣುಮಕ್ಕಳಿಗೆ ಜನ್ಮ ನೀಡುವ ಕೆಲವು ದಂಪತಿಗಳಿದ್ದಾರೆ. ಅಂತಹ ಮಹಿಳೆಯೊಬ್ಬರು ಹೆಣ್ಣು ಮಗುವನ್ನು ಹೊಂದುವ ಆಸೆಯಿಂದ 9 ಗಂಡು ಮಕ್ಕಳಿಗೆ ಜನ್ಮ ನೀಡಿದರು. ತನ್ನ ಆಸೆಯನ್ನು ಪೂರೈಸಲು ಹತ್ತನೇ ಬಾರಿಗೆ ಗರ್ಭಿಣಿಯಾದಳು. ಈ ಘಟನೆ ನಡೆದಿರುವುದು ಅಮೆರಿದಲ್ಲಿ.

ಮಹಿಳೆಯೊಬ್ಬರು ಹೆಣ್ಣುಮಗುವಿನ ಆಸೆಯಲ್ಲಿ 9 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇಷ್ಟೆಲ್ಲ ಆದರೂ ನಿಲ್ಲದ ಆಕೆ ಹತ್ತನೇ ಬಾರಿಗೆ ಗರ್ಭಿಣಿಯಾದಳು. ಮಹಿಳೆ ಹತ್ತನೇ ಬಾರಿಗೆ ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಆಸೆ ಈಡೇರಿದೆ.

ಯಲಾನ್ಸಿಯಾ ರೊಸಾರಿಯೊ ಎಂಬ 31 ವರ್ಷದ ಮಹಿಳೆ ಹತ್ತನೇ ಬಾರಿಗೆ ಗರ್ಭಿಣಿಯಾದಾಗ, ಅವಳು ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಅವಳಿ ಮಕ್ಕಳಲ್ಲಿ ಒಬ್ಬರು ಹೆಣ್ಣು ಮತ್ತು ಇನ್ನೊಬ್ಬರು ಹುಡುಗ. ಮಗಳು ಇಲ್ಲದಿದ್ದರೆ 11ನೇ ಬಾರಿಗೆ ಗರ್ಭಿಣಿಯಾಗಲು ಸಿದ್ಧಳಿದ್ದಳು. ಯಲಾನ್ಸಿಯಾ 18 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಗನಿಗೆ ಜನ್ಮ ನೀಡಿದಳು. ಅವರಿಗೆ ಈಗ 13 ವರ್ಷ. ಆದರೆ ಯಲಾನ್ಸಿಯಾ ರೊಸಾರಿಯೊ ಹತ್ತನೇ ಬಾರಿಗೆ ಮತ್ತೆ ಗರ್ಭಿಣಿಯಾದರು ಮತ್ತು ಅನೇಕರು ಅವಳನ್ನು ಟೀಕಿಸಿದರು. ಆಕೆ ತನ್ನ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂದು ಹಲವರು ಟೀಕಿಸಿದ್ದಾರೆ. ಈ ವಿಚಾರವಾಗಿ ಯಲನ್ಸಿಯಾ ಅವರನ್ನು ಅನೇಕರು ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಲನ್ಸಿಯಾ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

ವೀಡಿಯೊದಲ್ಲಿ, ಯಲಾನ್ಸಿಯಾ ಭವಿಷ್ಯದ ಬಗ್ಗೆ ತನ್ನ ಯೋಜನೆಗಳನ್ನು ಹೇಳುತ್ತಾಳೆ. ಯಲನ್ಸಿಯಾ ತನ್ನ ಎಲ್ಲಾ ಮಕ್ಕಳನ್ನು ವೀಡಿಯೊದಲ್ಲಿ ತೋರಿಸುತ್ತಾಳೆ ಮತ್ತು ಭವಿಷ್ಯದಲ್ಲಿ ಯಾರಾಗಬಹುದು ಎಂದು ಹೇಳುತ್ತಾಳೆ? ಒಬ್ಬ ಮಗ ಪೊಲೀಸ್ ಅಧಿಕಾರಿಯಾಗುತ್ತಾರೆ, ಒಬ್ಬರು ಬಾಣಸಿಗರಾಗುತ್ತಾರೆ, ಒಬ್ಬರು ಸಂಪಾದಕರಾಗುತ್ತಾರೆ ಮತ್ತು ಒಬ್ಬರು ಅಂಗಡಿಯನ್ನು ನಡೆಸುತ್ತಾರೆ ಎಂದು ಯಲಾನ್ಸಿಯಾ ವಿಡಿಯೋದಲ್ಲಿ ಹೇಳಿದ್ದಾರೆ. ಜನರು ಅವಳನ್ನು ಟೀಕಿಸಿದರೂ ಅಥವಾ ಟ್ರೋಲ್ ಮಾಡಿದವರಿಗೆ ಸ್ಪಷ್ಟನೆ ನೀಡಿದ್ದಾರೆ.