Newspaper: ಯುವತಿಯೊಬ್ಬಳು ಜಗತ್ತಿನ ಎಲ್ಲಾ ಸಾರಿ ಡಿಸೈನ್ಗಳಿಗೂ ಸೆಡ್ಡು ಹೊಡೆಯುವಂತಾ ಸಾರಿಯನ್ನು ತಯಾರಿಸಿದ್ದಾಳೆ.ಅದಕ್ಕೆ ಆಕೆ ತೆಗೆದುಕೊಂಡ ಸಮಯ ಕೇವಲ 4 ಗಂಟೆ ಮಾತ್ರ. ಈ ಕುರಿತಾದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕಲೆ ಮತ್ತು ಕರಕುಶಲ ಸೃಷ್ಟಿಗೆ ಹೆಸರುವಾಸಿಯಾದ ಪಾರ್ವತಿ ಎಂಬ ಮಹಿಳೆ Newspaper ಸೀರೆಯನ್ನು ಮಾಡಲು ಆಕೆಗೆ ನಾಲ್ಕು ಗಂಟೆಗಳು ಬೇಕಾಯಿತು. ಈ ಸೀರೆ ಎಷ್ಟು ನೈಜವಾಗಿ ಮತ್ತು ಉತ್ತಮವಾಗಿ ಕಾಣುತ್ತದೆ ಎಂದರೆ ಅದು ನೆಟಿಜನ್‌ಗಳನ್ನು ದಿಗ್ಭ್ರಮೆಗೊಳಿಸಿತು.
ಹಲವಾರು ನ್ಯೂಸ್ ಪೇಪರ್ಗಳನ್ನು ಒಟ್ಟು ಮಾಡಿ ತಾವೇ ಡಿಸೈನ್ ಮಾಡಿ ಈ ಒಂದು ಸಾರಿಯನ್ನು ರೆಡಿ ಮಾಡಿದ್ದಲ್ಲದೇ, ತಾವೇ ಉಟ್ಟುಕೊಂಡು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಒಂದು ಸಾರಿ ಡಿಸೈನ್ ಸಖತ್ ವೈರಲ್ ಆಗಿದೆ.
ಪಾರ್ವತಿ ಮೊದಲಿನಿಂದಲೂ ಆರ್ಟ್ ವರ್ಕ್ಶಾಪ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುತ್ತಾರೆ. ಸದ್ಯ ನ್ಯೂಸ್ ಪೇಪರ್ ಮೂಲಕ ಸಾರಿ ಸಿದ್ಧಗೊಳಿಸಿದ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಯುವತಿಯ ಈ ಕೆಲೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ವೀಡಿಯೊವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ, ಅವಳು ತನ್ನ ಕೆಲಸಕ್ಕೆ ಪ್ರಶಂಸೆ ಗಳಿಸಿದಳು. ನಾಲ್ಕು ಗಂಟೆಗಳಲ್ಲಿ ಸೀರೆಯನ್ನು ತಯಾರಿಸಿದ ಆಕೆಯ ಸೃಜನಶೀಲತೆ ಮತ್ತು ತಾಳ್ಮೆಯನ್ನು ಜನರು ಮೆಚ್ಚಿಕೊಂಡರು.