ದೆಹಲಿ: ಹೋಮ್ವರ್ಕ್ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯೊಬ್ಬಳು ತನ್ನ ಐದು ವರ್ಷದ ಮಗಳಿಗೆ ಭಯಂಕರ ಅನಿಸುವಂಥ ಶಿಕ್ಷೆಯನ್ನು ನೀಡಿದ್ದಾಳೆ. ಸಂಕಟ ತಾಳಲಾಗದೆ ಮಗು ಒದ್ದಾಡುತ್ತಿದ್ದುದನ್ನು ನೋಡಿದ ಯಾರಿಗೇ ಆದರೂ ಕರುಳು ಚುರುಕ್ ಅನಿಸುವಂಥ ಘಟನೆ ಇದು.
ಇಂಥದ್ದೊಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ಕುರಿತು ದೆಹಲಿ ಪೊಲೀಸರಿಗೆ ಸಾರ್ವಜನಿಕರು ದೂರು ಕೂಡ ನೀಡಿದ್ದಾರೆ. ಬಾಲಕಿಯೊಬ್ಬಳ ಕೈಕಾಲು ಕಟ್ಟಿ ಹಾಕಿ ಸುಡುಸುಡುವ ಬಿಸಿಲಿನಲ್ಲಿ ಟೆರೇಸ್ನಲ್ಲಿ ಮಲಗಿಸಿದ ದೃಶ್ಯಾವಳಿ ಇರುವ ವಿಡಿಯೋ ಕಂಡ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸ್ಥಳವನ್ನು ಪತ್ತೆ ಮಾಡಲು ಮುಂದಾಗಿದ್ದು, ದೆಹಲಿಯ ಟುಕ್ಮಿರ್ಪುರ್ನ ಖಜೂರಿ ಖಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಹೋಮ್ವರ್ಕ್ ಮಾಡದಕ್ಕೆ ಮಗಳಿಗೆ ಹಾಗೆ ಶಿಕ್ಷೆ ಕೊಟ್ಟಿದ್ದು ನಿಜ. ಬರೀ 5ರಿಂದ 7 ನಿಮಿಷ ಮಾತ್ರ ಹಾಗೆ ಕಟ್ಟಿ ಹಾಕಿದ್ದು, ಬಳಿಕ ಕೆಳಗೆ ಮನೆಯೊಳಕ್ಕೆ ಕರೆದುಕೊಂಡು ಬಂದಿದ್ದೇನೆ ಎಂಬುದಾಗಿ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.