ನ್ಯೂಸ್

ಕೋರ್ಟ್​ ಆವರಣದಲ್ಲೇ ವ್ಯಕ್ತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ! ಮಧ್ಯೆ ಪ್ರವೇಶಿಸದ ಪೊಲೀಸರು

ಉತ್ತರ ಪ್ರದೇಶ: ವ್ಯಕ್ತಿಯೊಬ್ಬನಿಗೆ ತನ್ನ ಚಪ್ಪಲಿ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ, ಆತ ನೆಲಕ್ಕೆ ಬಿದ್ದರೂ ಸಹ ಬಿಡದೆ ಹೊಡೆದಿರುವ ದೃಶ್ಯ ಸದ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘಟನೆ ಉತ್ತರಪ್ರದೇಶದ ಉನ್ನೋ ಕೋರ್ಟ್​ ಆವರಣದಲ್ಲಿ ವರದಿಯಾಗಿದೆ.

ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಆತ ಮಹಿಳೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಮಾಡುತ್ತಿದ್ದ. ಇದರಿಂದ ತೀವ್ರ ಮನನೊಂದಿದ್ದ ಆಕೆ, ತನಗೆ ತೊಂದರೆಗೀಡು ಮಾಡುತ್ತಿದ್ದವನು ನೇರವಾಗಿ ಎದುರಿಗೆ ಸಿಕ್ಕಿದ ಎಂದು ಯುವಕನನ್ನು ಎಳೆದಾಡಿ, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಆತ ಮಾಡಿದ್ದ ಅಸಭ್ಯ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಗಾಗಿ ಇಟ್ಟುಕೊಂಡಿದ್ದ ಮಹಿಳೆ, ಕೋಪದಲ್ಲಿ ಮನಬಂದಂತೆ ಸಾರ್ವಜನಿಕರ ಮುಂದೆ ಹೊಡೆದಿದ್ದಾಳೆ.

ವಿಡಿಯೋದಲ್ಲಿ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆಯುತ್ತಿರುವ ಮಹಿಳೆ, ಫೇಸ್​ಬುಕ್​ನಲ್ಲಿ ಇಂತಹ ಕಮೆಂಟ್​ ಮಾಡಲು ನಿನಗೆ ಎಷ್ಟೋ ಧೈರ್ಯ? ನಾನು ಸರಿಯಿಲ್ಲ ಎಂದು ಹೇಗೆ ಹೇಳ್ತಿಯಾ? ಎಂದು ಪ್ರಶ್ನಿಸುತ್ತಿದ್ದಂತೆ, ಆತ ಮಹಿಳೆಗೆ ಕೈಮುಗಿದು ಕ್ಷಮೆಕೋರಿದ್ದಾನೆ. ಇದ್ಯಾವುದಕ್ಕೂ ಬಗ್ಗದ ಆಕೆ, ಮೊದಲು ಕೋರ್ಟ್​ ಹೊರಗಿನ ಅಂಗಡಿ ಮುಂದೆ ಥಳಿಸಿ, ಆನಂತರ ನ್ಯಾಯಾಲಯದ ಆವರಣದೊಳಗೆ ಕರೆತಂದು ಹೊಡೆದಿದ್ದಾಳೆ. ಇವರಿಬ್ಬರ ಜಗಳ ಬಿಡಿಸುವಲ್ಲಿ ಪೊಲೀಸರು ಮುಂದಾಗದೆ ಇದ್ದಿದ್ದು ಸ್ಥಳೀಯರಲ್ಲಿ ಆಶ್ಚರ್ಯ ತಂದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).