ಮುಂಬೈ: ಕಳೆದ ವರ್ಷ ಟೂತ್ ಬ್ರಷ್ ನುಂಗಿದ್ದ ಸ್ಪ್ಯಾನಿಷ್ ಯುವತಿಯ ಪರದಾಟ ನೆನಪಿದೆಯೇ? ಅದು ನೆನಪಿದ್ರೆ ಖಂಡಿತ ಈ ಘಟನೆ ಕೂಡ ಅದನ್ನೇ ಹೋಲುತ್ತದೆ. ಇತ್ತೀಚೆಗಷ್ಟೇ ಭಾರತದಲ್ಲಿ ಇಂತಹದ್ದೇ ಒಂದು ಘಟನೆ ಸಂಭವಿಸಿದೆ. ಪುಣೆಯ ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ. ಅಸಲಿಗೆ ಈ ರೀತಿಯ ಘಟನೆ ಈ ಹಿಂದೆ ನಡೆದಿದ್ದೇ ಆದರೂ ಇದು ಕೊಂಚ ವಿಚಿತ್ರವಾಗಿದೆ. 40 ವರ್ಷ ವಯಸ್ಸಿನ ಮಹಿಳೆಯ ಗಂಟಲಿನಲ್ಲಿ ಬ್ರಷ್? ಇದು ಹೇಗಾಯ್ತು? ಎಂದು ಆಕೆಯನ್ನು ಚಿಕಿತ್ಸೆಗೆ ಒಳಪಡಿಸಿದ ವೈದ್ಯರೇ ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಂಸ್ಥೆಯ ವಿರುದ್ಧ FIR ದಾಖಲಿಸಿದ ಅರಣ್ಯ ಇಲಾಖೆ..! |Yash Toxic in Trouble
ನಾಲಿಗೆ ಉಜ್ಜುವಾಗ ಬ್ರಷ್ ಅನ್ನು ಗಂಟಲಿನೊಳಗೆ ಇಳಿಸಿಕೊಂಡ ಮಹಿಳೆ, ಒಂದು ನಿಮಿಷ ಏನು ಮಾಡಬೇಕೆಂದು ತಿಳಿಯದೆ ಸಹಾಯಕ್ಕಾಗಿ ಚೀರಾಡಿದ್ದಾರೆ. ಕೂಡಲೇ ಆಕೆಯ ಕುಟುಂಬಸ್ಥರು ಪುಣೆಯಲ್ಲಿನ ಡಿವೈ ಪಾಟೀಲ್ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ವಿಚಿತ್ರ ಹಾಗೂ ಅಪರೂಪದ ಕೇಸ್ ಅನ್ನು ಪರಿಶೀಲಿಸಿದ ಹಿರಿಯ ವೈದ್ಯರು, ನಿಜಕ್ಕೂ ಇಂತಹ ಘಟನೆಗಳನ್ನು ನಂಬಲು ಅಸಾಧ್ಯವಾಗುತ್ತದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದಿದ್ದಾರೆ.
"ಹಲ್ಲು ಉಜ್ಜುವ ಬ್ರಷ್ ನುಂಗುವ ಪ್ರಕರಣಗಳು ಬಹಳ ಅಪರೂಪವಾಗಿದೆ. ಇಲ್ಲಿಯವರೆಗೆ 30ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ರೋಗಿಗಳು ಸ್ಕಿಜೋಫ್ರೇನಿಯಾ, ಬುಲಿಮಿಯಾ ಅಥವಾ ಅನೋರೆಕ್ಸಿಯಾದಿಂದ ಬಳಲುತ್ತಿರುವವರು ಇಂತಹ ಘಟನೆಗೆ ಗುರಿಯಾಗುತ್ತಾರೆ. ಜನರು ನಾಣ್ಯಗಳಂತಹ ಸಣ್ಣ ವಸ್ತುಗಳನ್ನು ನುಂಗುವ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಷ್ಟು ಉದ್ದದ ಬ್ರಷ್ ಅನ್ನು ನುಂಗಿದ ಪ್ರಕರಣಗಳ ಪೈಕಿ ಮಹಾರಾಷ್ಟ್ರದ 40 ವರ್ಷ ಮಹಿಳೆಯದ್ದೇ ಮೊದಲು" ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಭಿಜೀತ್ ಕರದ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).