ಕಾಸ್‌ಗಂಜ್: ಪ್ರಜ್ಞೆ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಹಿಳೆಯೊಬ್ಬಳ ಮೇಲೆ ಗೂಡ್ಸ್ ರೈಲು ಹರಿದರೂ ಆಕೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ನಡೆದಿದೆ.
ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಸೆಲ್ಫಿ ಕ್ಲಿಕ್ಕಿಸಲು ಹೋದ ಇಬ್ಬರು ಯುವಕರು ದುರ್ಮರಣ!
ಮಹಿಳೆಯನ್ನು ಹರ್ಪ್ಯಾರಿ(40) ಎಂದು ಗುರುತಿಸಲಾಗಿದ್ದು, ಸಮೀಪದ ಆರ್ಯ ನಗರದ ನಿವಾಸಿಯಾಗಿದ್ದಾಳೆ. ಮಹಿಳೆಯು ಔಷಧಿ ಖರೀದಿಸಲು ಮನೆಯಿಂದ ನಡೆದು ಹಳಿಗಳ ಮೇಲೆ ಸಾಗುವಾಗ ಪ್ರಜ್ಞೆತಪ್ಪಿ ಅಲ್ಲಿಯೇ ಬಿದ್ದಿದ್ದಾಳೆ.
ಈ ವೇಳೆ ಹಿಂದಿನಿಂದ ಬಂದ ಗೂಡ್ಸ್ ರೈಲಿನ ಕೆಲವು ಬೋಗಿಗಳು ಆಕೆಯ ಮೇಲೆ ಹಾದು ಹೋಗಿದ್ದು, ಆಕೆಗೆ ಎಚ್ಚರವಾಗಿದೆ. ದೂರದಿಂದ ಈ ಘಟನೆಯನ್ನು ಮೂಕವಿಸ್ಮಿತರಾಗಿ ಈ ಘಟನೆಯನ್ನು ನೋಡುತ್ತಿದ್ದ ಜನರು ಆಕೆಗೆ ಅಲುಗಾಡದಂತೆ ಅಲ್ಲಿಯೇ ಮಲಗುವಂತೆ ಕೂಗುವುದರ ಜತೆಗೆ ಕೈಸನ್ನೆ ಮಾಡಿದ್ದಾರೆ.
ಗೂಡ್ಸ್ ರೈಲುಗಳು ನಿರ್ಗಮಿಸಿದ ನಂತರ ಸ್ಥಳೀಯರು ಆಕೆಯ ಸಹಾಯಕ್ಕಾಗಿ ಧಾವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಪರಿಣಾಮ ಆಕೆಯ ತಲೆಗೆ ಸಣ್ಣ ಗಾಯವಾಗಿದೆ. ಮಾಹಿತಿ ಪಡೆದ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: VIDEO| ಕಾರೊಳಗೆ ನಾಯಿಯನ್ನು ಬಿಟ್ಟು ತಾಜ್‌ಮಹಲ್ ನೋಡಲು ಹೋದ್ರು; ಇತ್ತ ಉಸಿರುಕಟ್ಟಿ ಶ್ವಾನ ಪ್ರಾಣ ಬಿಡ್ತು..ರೈಲ್ವೆ ಹಳಿಗಳ ಮೇಲೆ ಅತಿಕ್ರಮಣ ಮಾಡುವುದು 1989ರ ರೈಲ್ವೇ ಕಾಯಿದೆಯ ಸೆಕ್ಷನ್ 147ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು , ಇದರ ಅಡಿಯಲ್ಲಿ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ರೂ 1,000 ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಈ ಕಾನೂನಿನ ಹೊರತಾಗಿಯೂ, ಹಳಿಯಲ್ಲಿ ನಡೆದಾಡುವ, ದಾಟುವ ಅಪಾಯಕಾರಿ ಅಭ್ಯಾಸ ದೇಶದಲ್ಲಿ ಮುಂದುವರೆದಿದೆ.
(ಏಜೆನ್ಸೀಸ್)