ನ್ಯೂಸ್

VIDEO| ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಡೈನೋಸಾರ್ ರೀತಿಯ ಜೀವಿ: ಬೆಚ್ಚಿಬೀಳಿಸೋ ವಿಡಿಯೋ ಇದು! ​

ನವದೆಹಲಿ: ಅಳಿದು ಹೋಗಿರುವ ಜೀವಿಗಳಲ್ಲಿ ಒಂದಾದ ಡೈನೋಸಾರ್​ಗಳು ಇಂದಿಗೂ ಜೀವಂತವಾಗಿದೆ ಎಂದರೆ ಯಾರು ನಂಬಲಾರರು. ಆದರೆ, ಅವುಗಳ ಪಳೆಯುಳಿಕೆಗಳು ಮಾತ್ರ ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಇನ್ನು ಸಿನಿಮಾಗಳಲ್ಲಿ ಡೈನೋಸಾರ್​ಗಳನ್ನು ನೋಡಿ ಬೆಚ್ಚಿಬಿದ್ದವರೆಷ್ಟೋ? ಆದರೆ ಇಲ್ಲೊಬ್ಬ ಮಹಿಳೆ ನಿಜವಾಗಿಯೂ ಡೈನೋಸಾರ್​ ನೋಡಿದ್ದಾಗಿ ಹೇಳಿಕೊಂಡಿದ್ದಾಳೆ.

ಮನೆಯ ಮಾಲಕಿಯೊಬ್ಬಳು ತಮ್ಮ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಡೈನೋಸಾರ್​ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅದರಲ್ಲಿ ಡೈನೋಸರ್​ ಮಾದರಿಯಲ್ಲಿ ಜೀವಿಯೊಂದು ರಾತ್ರಿಯ ವೇಳೆ ಓಡುವುದನ್ನು ಕಾಣಬಹುದಾಗಿದೆ.

ಡೈನೋಸಾರ್​ ನೋಡಿದ್ದಾಗಿ ವಾದಿಸಿರುವ ಮಹಿಳೆಯ ಹೆಸರು ಕ್ರಿಶ್ಚಿಯನಾ ರಯಾನ್​. ನಸುಕಿನ ಜಾವದಲ್ಲಿ ಈ ದೃಶ್ಯ ತಮ್ಮ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆಯಂತೆ. ಅದರಲ್ಲಿ ಡೈನೋಸಾರ್​ ಮಾದರಿಯ ಜೀವಿಯೊಂದ ಅವಳ ಮನೆಯ ಗಾರ್ಡನ್​ ಸುತ್ತ ಓಡಾಡಿರುವುದು ದಾಖಲಾಗಿದೆ.

ಜಾಲತಾಣಿಗರು ಸಹ ವಿಡಿಯೋ ನೋಡಿ ಒಂದು ಕ್ಷಣ ಹೆದರಿದ್ದಾರೆ. ನೋಡಲು ಥೇಟ್​ ಡೈನೋಸಾರ್ ಮರಿಯ​ ರೀತಿ ಇದೆ. ನಾನು ನೋಡಿದ್ದು ಡೈನೋಸಾರ್​ ಮರಿಯೇ ಎಂದು ರಯಾನ್​ ವಾದಿಸಿದ್ದಾಳೆ.

ಆದರೆ, ಜಾಲತಾಣಿಗರು ಅದು ಡೈನೋಸಾರ್​ ಅಲ್ಲ. ನೋಡಲು ನವಿಲಿನಂತೆ ಕಾಣುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ತಲೆಗೆ ಬಕೆಟ್​ ಸಿಕ್ಕಿ ಹಾಕಿಕೊಂಡು ಓಡಿ ಹೋಗಿರುವ ಜೀವಿಯಂತೆ ಕಾಣುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)