ಸಾಂದರ್ಭಿಕ ಚಿತ್ರ 
ನ್ಯೂಸ್

ಬಾಯ್​ಫ್ರೆಂಡ್​ನಿಂದ 300 ಮಹಿಳೆಯರಿಗೆ ಮೋಸ; ಪವರ್​ಪಾಯಿಂಟ್​​ನಲ್ಲಿ ಎಳೆಎಳೆಯಾಗಿ ಕಥೆ ಬಿಚ್ಚಿಟ್ಟ ಗರ್ಲ್​​ಫ್ರೆಂಡ್

ಬೀಜಿಂಗ್​​: ಪ್ರೀತಿಯಲ್ಲಿ ಮೋಸ ಹೋದ ಬಳಿಕ ಅಥವಾ ಸಂಬಂಧದಲ್ಲಿ ಬಿರುಕುಗೊಂಡ ಬಳಿಕ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾರೆ. ಕೆಲವು ಮಹಿಳೆಯರು ತಮ್ಮ ಪ್ರೇಮಿಗಳನ್ನು ಎಂದಿಗೂ ಕ್ಷಮಿಸುವುದಿಲ್ಲ. ಆಗಿದ್ದನ್ನೂ ನೆನೆದು ಸದಾ ಬೇಜಾರಿನಲ್ಲಿ ಇರುತ್ತದೆ. ಆದರೆ ಇಲ್ಲೊಂದು ಘಟನೆ ಇದಕ್ಕೆ ತದ್ವಿರುದ್ದವಾಗಿದೆ. ತನಗೆ ಮೋಸ ಮಾಡಿದ ಪ್ರೇಮಿಯ ವಿರುದ್ಧ ಮಹಿಳೆಯೊಬ್ಬರು ಸೇಡು ತೀರಿಸಿಕೊಂಡಿದ್ದಾರೆ. ಆತನ ಮೋಸವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿ ಆತನನ್ನು ಉದ್ಯೋಗದಿಂದ ತೆಗೆದುಹಾಕುವಂತೆ ಮಾಡಿರುವ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ.

ಆ ಮಹಿಳೆ ತನ್ನ ಬಾಯ್​ಫ್ರೆಂಡ್​ ಮೋಸವನ್ನು ಬಯಲಿಗೆಳೆಯಲು 58 ಪುಟಗಳ ಪವರ್‌ಪಾಯಿಂಟ್ ಅನ್ನು ಸಿದ್ಧಪಡಿಸಿದ್ದಾಳೆ. ಇದರಲ್ಲಿ ಆತನ ಇತರರೊಂದಿಗೆ ಮಾಡಿರುವ ಚಾಟ್​ಗಳು ಮತ್ತು ಫೋಟೋಗಳು ಸೇರಿವೆ. ಈ ಪವರ್​ಪಾಯಿಂಟ್​ ಅನ್ನು ಸೆಪ್ಟೆಂಬರ್​ 19ರಂದು ಸಾಮಾಜಿಕ ಜಾಲತಾಣಲದಲ್ಲಿ ಅಪ್​ಲೋಡ್ ಮಾಡಿದ್ದು 300 ಮಿಲಿಯನ್​ಗೂ ಹೆಚ್ಚು ಮಂದಿ ಅದನ್ನು ವೀಕ್ಷಿಸಿದ್ದಾರೆ. ಇದರಿಂದ ಅದು ಟಾಪ್​​ ಟ್ರೆಂಡಿಂಗ್ ಪೋಸ್ಟ್ ಆಗಿದೆ.

ಆಕೆ ರಚಿಸಿರುವ ಪವರ್‌ಪಾಯಿಂಟ್ ಫೈಲ್‌ನಲ್ಲಿ, ಬ್ಯಾಂಕ್‌ ಒಂದರ ಪ್ರಧಾನ ಕಚೇರಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಶಿ ಎಂಬ ಹೆಸರಿನ ವ್ಯಕ್ತಿ ಒಂದು ವರ್ಷದ ಅವಧಿಯಲ್ಲಿ ವೇಶ್ಯವಾಟಿಕೆ ಮಾಡುವವರು ಸೇರಿದಂತೆ 300ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ.

ಸಂಭಾವಿತನೆಂದು ಪರಿಗಣಿಸಿ ಕಳೆದ ವರ್ಷ ಅಕ್ಟೋಬರ್‌ನಿಂದ ಆತನೊಂದಿಗೆ ಡೇಟಿಂಗ್​ ಮಾಡಲು ಪ್ರಾರಂಭಿಸಿದೆ. ಜೂನ್‌ನಲ್ಲಿ ಅವನು ಹಲವು ಮಹಿಳೆಯರೊಂದಿಗೆ ಮಾಡಿರುವ ಚಾಟ್​​ನಲ್ಲಿ ಮಾಡಿರುವ ಅಸಭ್ಯ ಮೆಸೇಜ್​​ಗಳು ಸಿಕ್ಕಿದವು. ಅದನ್ನು ನೋಡಿ ನನಗೆ ಆಘಾತವಾಯಿತು.

ಮಾರ್ಚ್‌ನಿಂದ ಆಗಸ್ಟ್‌ವರೆಗೆ 2,500 ರಿಂದ 5,000 ಯುವಾನ್ (30,000 ರೂ.-60,000 ರೂ.) ವರೆಗೆ ಪಾವತಿಸಿ ವೇಶ್ಯವಾಟಿಕೆ ನಡೆಸುವವರೊಂದಿಗೆ ಕನಿಷ್ಠ ಒಂಬತ್ತು ಬಾರಿ ಸಂಪರ್ಕ ಸಾಧಿಸಿದ್ದಾನೆ ಎಂದು ಪವರ್​ಪಾಯಿಂಟ್​ನಲ್ಲಿ ಬಹಿರಂಗ ಪಡಿಸಿದ್ದಾಳೆ. ಅಂದ್ಹಾಗೆ ಚೀನಾದಲ್ಲಿ ವೇಶ್ಯವಾಟಿಕೆ ಮಾಡುವವರೊಂದಿಗೆ ತೊಡಗಿಸಿಕೊಳ್ಳುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ಹೆಚ್ಚುವರಿಯಾಗಿ ಪವರ್​ಪಾಯಿಂಟ್​​ನಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಭೇಟಿಯಾದ ಸುಮಾರು 300 ಮಹಿಳೆಯರೊಂದಿಗೆ ಮಾಡಿರುವ ಮೆಸೇಜ್​ ಜತಗೆ ಫೋಟೋಗಳನ್ನು ಮಹಿಳೆ ಹಂಚಿಕೊಂಡಿದ್ದಾಳೆ. ಅಲ್ಲದೆ ಈ ವಿಚಾರ ತಿಳಿದ ಬಳಿಕ ಅವನು ನನ್ನ ಮುಂದೆ ಮಂಡಿಯೂರಿ ಕುಳಿತು ಯಾರಿಗೂ ಹೇಳಬೇಡ ಎಂದು ಬೇಡಿಕೊಂಡನು. ಮತ್ತೆ ಎಂದಿಗೂ ಈ ತಪ್ಪನ್ನು ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದ. ನನ್ನ ಪಾಲಕರು ಅಸಮಾಧಾನಗೊಳ್ಳುತ್ತಾರೆ ಎಂದು ಅವನನ್ನು ನಾನು ಕ್ಷಮಿಸಿದೆ ಎಂದು ತಿಳಿಸಿದ್ದಾಳೆ.

ಆದರೆ ತನ್ನ ಕೆಟ್ಟಬುದ್ದಿಯನ್ನೂ ಬಿಡದೆ ಸೆಪ್ಟೆಂಬರ್‌ನಲ್ಲಿ ಅವನು ಮತ್ತದೆ ಚಾಳಿಯನ್ನು ಮುಂದುವರಿಸಿದ್ದಾನೆ. ಇದನ್ನು ನೋಡಿದ ನನಗೆ ಅವರನು ಬದಲಾಗುವುದಿಲ್ಲ ಎಂದು ಅರ್ಥವಾಯಿತು. ಆದ್ದರಿಂದ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಗಿ ಹೇಳಿದ್ದಾಳೆ. ಈ ವಿಷಯದ ತನಿಖೆಯ ನಂತರ ಶಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಬ್ಯಾಂಕ್ ಘೋಷಿಸಿರುವುದಾಗಿ ಚೀನಾದ ಮಾಧ್ಯಮ ಔಟ್ಲೆಟ್ ಸೆಕ್ಯುರಿಟೀಸ್ ಟೈಮ್ಸ್ ವರದಿ ಮಾಡಿದೆ. ಚೀನಾದಲ್ಲಿ ಕಾನೂನುಬಾಹಿರವಾಗಿರುವ ವೇಶ್ಯಾವಾಟಿಕೆ ಮಾಡುವವರೊಂದಿಗೆ ಸಂಪರ್ಕ ಸಾಧಿಸಿದ್ದಕ್ಕಾಗಿ ಪೊಲೀಸರು ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವುದಾಗಿ ಮಹಿಳೆ ಸೂಚಿಸಿದ್ದಾರೆ.

ಮಹಿಳೆಯ ಈ ಪವರ್​​ಪಾಯಿಂಟ್​​ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ನೆಟ್ಟಿಗರು ಈಕೆ ಶಕ್ತಿವಂತ ಮಹಿಳೆ, ಮಹಿಳೆಯರು ಈ ರೀತಿಯ ವರ್ತನೆಯನ್ನು ಎಂದಿಗೂ ಕ್ಷಮಿಸುವುದಿಲ್ಲ, 300 ಮಹಿಳೆಯರ ಜತೆಗೆ ಗರ್ಲ್​​ಫ್ರೆಂಡ್​ಗೆ ಮೋಸ ಮಾಡುವಷ್ಟು ಸಮಯವಿದ್ದರೆ ಚೀನಾದಲ್ಲಿನ ಬ್ಯಾಂಕ್​ಗಳಲ್ಲಿ ಕೆಲಸ ಮಾಡುವುದು ನಿಜವಾಗಿಯೂ ಸುಲಭ ಎನ್ನಿಸುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​​)