Miraculous Escape ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್‌ಗಳು ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುವ ವೀಡಿಯೊಗಳನ್ನು ನೀಡುವುದು ತೀರಾ ಅಸಾಮಾನ್ಯವೇನಲ್ಲ. ಪ್ರತಿದಿನ ಲಕ್ಷಾಂತರ ವೀಡಿಯೊಗಳು ಅಪ್‌ಲೋಡ್ ಆಗುತ್ತವೆಯಾದರೂ, ಅವುಗಳಲ್ಲಿ ಕೆಲವು ದೃಶ್ಯಗಳು ಇಡೀ ಇಂಟರ್ನೆಟ್ ಜಗತ್ತನ್ನು ಬೆಚ್ಚಿಬೀಳಿಸುತ್ತವೆ. ಅನಿರೀಕ್ಷಿತ ರಸ್ತೆ ಅಪಘಾತಗಳು, ನಂಬಲಾಗದಷ್ಟು (Miraculous Escape) ಹತ್ತಿರದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಘಟನೆಗಳು ಹಾಗೂ ಪ್ರಕೃತಿ ವಿಕೋಪದ ಲೈವ್ ದೃಶ್ಯಗಳನ್ನೊಳಗೊಂಡ ಕೆಲವು ತುಣುಕುಗಳು ಎಷ್ಟು ಆಘಾತಕಾರಿ ಎಂದರೆ, ವೀಕ್ಷಕರು ಅವುಗಳನ್ನು ನಂಬಲಾರದೆ ಹಲವು ಬಾರಿ ವೀಕ್ಷಿಸುತ್ತಾರೆ.
ಆದಾಗ್ಯೂ, ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಪ್ರಬಲ ಚಂಡಮಾರುತದ ಸಮಯದಲ್ಲಿ ಪವಾಡಸದೃಶವಾಗಿ ಪಾರಾದ ಮಹಿಳೆಯೊಬ್ಬಳ ವಿಡಿಯೋವೊಂದು ಆನ್ಲೈನ್ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಾರುವ ತಗಡಿನಿಂದ ಕೂದಲೆಳೆಯ ಅಂತರದಲ್ಲಿ ಬಚಾವಾದ ಮಹಿಳೆ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭೀಕರ ಬಿರುಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಗಾಳಿಯ ವೇಗಕ್ಕೆ ರಸ್ತೆಯಲ್ಲಿದ್ದ ಧೂಳು, ಕಸವೆಲ್ಲ ಹಾರಾಡುತ್ತಿದ್ದು, ಇಡೀ ಪ್ರದೇಶವೇ ಗೊಂದಲಮಯವಾಗಿದೆ. ರಸ್ತೆಯಲ್ಲಿ ಜನಸಂಚಾರ ವಿರಳವಾಗಿದ್ದ ಆ ಸಮಯದಲ್ಲಿ, ಹಳದಿ ಬಣ್ಣದ ಬಟ್ಟೆ ಧರಿಸಿದ್ದ ಮಹಿಳೆಯೊಬ್ಬರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ.
ಆದಾಗ್ಯೂ, ಮಹಿಳೆ ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಹತ್ತಿರದ ಕಟ್ಟಡವೊಂದರ ಛಾವಣಿಯ ಮೇಲೆ ಅಳವಡಿಸಲಾಗಿದ್ದ ಬೃಹತ್ ಟಿನ್ ಶೆಡ್ ಗಾಳಿಯ ಬಲಕ್ಕೆ ಸಂಪೂರ್ಣವಾಗಿ ಕಿತ್ತು ಹಾರಿಬಂದು ನೇರವಾಗಿ ನಡೆದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯ ಮಟ್ಟಕ್ಕೆ ತಲುಪುತ್ತಿದ್ದಂತೆಯೇ ಅದನ್ನು ಬೇಗ ತಳ್ಳಿ ಸುರಕ್ಷತೆಯ ಕಡೆಗೆ ಓಡಿಹೋಗಿ ಅಪಾತಯದಿಂದ ಪಾರಾಗಿದ್ದಾರೆ.
ಪೋಸ್ಟ್ನಲ್ಲೇನಿದೆ?
ಈ ವಿಡಿಯೋವನ್ನು ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ನಿನ್ನೆ ಸಂಜೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಬಿರುಗಾಳಿಯಿಂದಾಗಿ, ಒಂದು ತಗಡಿನ ಶೆಡ್ ಹಾರಿಹೋಯಿತು. ಒಬ್ಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು; ಆಕೆಯ ಕುತ್ತಿಗೆ ಬಹುತೇಕ ಕತ್ತರಿಸಲ್ಪಟ್ಟಿತ್ತು" ಎಂಬ ಆಘಾತಕಾರಿ ಶೀರ್ಷಿಕೆಯನ್ನು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಒಬ್ಬ ಬಳಕೆದಾರ ಇತ್ತೀಚಿನ ದಿನಗಳಲ್ಲಿ ಈ ಟಿನ್ ಶೆಡ್‌ಗಳನ್ನು ಎಲ್ಲೆಡೆ ಹಾಕಲಾಗುತ್ತಿವೆ. ಇದರಿಂದ ಯಾವುದೇ ಸಮಯದಲ್ಲೂ ದೊಡ್ಡ ಅಪಘಾತಗಳು ಸಂಭವಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಓ ದೇವರೇ, ಈ ಘಟನೆ ಹೇಗೆ ಸಂಭವಿಸಿತು? ಅವರು ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ (ಏಜೆನ್ಸೀಸ್).