ನ್ಯೂಸ್

ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ರು: ಸಹಾಯ ಮಾಡಿದ್ದಕ್ಕೆ ಶಿಕ್ಷೆ!

ಕನೌಜ್​: ಓರ್ವ ಮಹಿಳೆ ಮತ್ತು ವಿಕಲಾಂಗ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ತಲೆ ಬೋಳಿಸಿ, ಚಪ್ಪಲಿಯಿಂದ ಮಾಡಿದ ಹಾರವನ್ನು ಹಾಕಿ ಮೆರವಣಿಗೆ ಮಾಡಿ ಅವಮಾನಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್​​​​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

37 ವರ್ಷದ ಸಂತ್ರಸ್ತ ಮಹಿಳೆಯ ಸಂಬಂಧಿಕರಿಂದಲೇ ಬುಧವಾರ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಸಂತ್ರಸ್ತ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಬಳಿಕ ಮಹಿಳೆಯ ಸ್ನೇಹಿತನಾಗಿದ್ದ 40 ವರ್ಷ ವಿಕಲಾಂಗ ವ್ಯಕ್ತಿ ಆಕೆ ಸಹಾಯ ಮಾಡುತ್ತಿದ್ದ. ಆದರೆ, ಇಬ್ಬರ ಸ್ನೇಹ ಮಹಿಳೆಯ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮಹಿಳೆಯ ಸಂಬಂಧಿಕರು ಇಬ್ಬರನ್ನು ಸೆರೆಹಿಡಿದು ತಲೆ ಬೋಳಿಸಿ, ಮೆರವಣಿಗೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದ್ದು, ಒಟ್ಟು 8 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ. (ಏಜೆನ್ಸೀಸ್​)