ನ್ಯೂಸ್

Woman Kisses Cobra : ನಾಗರ ಹಾವಿಗೆ ಮುತ್ತಿಕ್ಕಿ ಹಾವಿನಂತೆ ಡ್ಯಾನ್ಸ್ ಮಾಡಿದ ಯುವತಿ!

Woman Kisses Cobra: ಹಾವಿನಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ದೂರ ಉಳಿಯುತ್ತವೆ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದರೆ ನಿಮ್ಮ ಕಣ್ಣನ್ನೇ ನಂಬಲು ಕಷ್ಟವಾಗುತ್ತಿದೆ. ಯಾಕೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ನಾಗರಹಾವಿನ ಪಕ್ಕದಲ್ಲಿ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಲ್ಲದೆ, ಯಾವುದೇ ಭಯವಿಲ್ಲದೆ ಹಾವಿಗೆ ನಾಲಿಗೆಯಿಂದ ಮುತ್ತಿಟ್ಟಿದ್ದಾಳೆ.

ವಿಡಿಯೋದಲ್ಲಿ, ಯುವತಿಯೊಬ್ಬಳು  ತನ್ನ ನಾಲಿಗೆಯಿಂದ ನಾಗರಹಾವಿಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಮರುಕ್ಷಣವೇ ನಾಗರ ಹಾವು ತನ್ನ ತಲೆಯನ್ನು ಹಿಂದಕ್ಕೆ ತಿರುಗಿಸಿ ಯುವತಿಯನ್ನು ನೋಡತೊಡಗಿತು. ಯುವತಿಯು ರಾಜ ಹಾವು ತನ್ನತ್ತ ನೋಡುತ್ತಿದ್ದಂತೆ ಕುಣಿಯಲು ಪ್ರಾರಂಭಿಸಿದಳು.

ಈ ಘಟನೆ ಎಲ್ಲಿ ನಡೆದಿದೆ.. ಯಾವಾಗ ಎಂಬ ಬಗ್ಗೆ ಸ್ಪಷ್ಟ ಸ್ಪಷ್ಟತೆ ಇಲ್ಲ. ಯುವತಿಯೇ ಈ ವೀಡಿಯೋವನ್ನು ತನ್ನ Instagram ಖಾತೆಯ lucky_udaan4090 ನಲ್ಲಿ ಹಂಚಿಕೊಂಡಿದ್ದಾಳೆ. ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇದು ಮೂರ್ಖತನ...ವನ್ಯಜೀವಿಗಳನ್ನು ಗೌರವಿಸಿ... ವೈಯಕ್ತಿಕ ಲಾಭಕ್ಕಾಗಿ ಜೀವಿಗಳಿಗೆ ಯಾಕೆ ತೊಂದರೆ ಕೊಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.