ನ್ಯೂಸ್

ಪತಿಯನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ಪತ್ನಿ

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಲೆ ಮಾಡಿ ಐದು ತುಂಡುಗಳನ್ನಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಘಟನೆ ಉತ್ತರಪ್ರದೇಶದ ಫಲಿಬಿತ್​ನಲ್ಲಿ ನಡೆದಿದೆ.

ಮೃತರನ್ನು ರಾಮ್​ಪಾಲ್​(55) ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲವೆಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ಧಾರೆ. ರಾಮ್​ಪಾಲ್​ ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿದ್ದಾರೆ ಎಂದು ಅವರ ಮಗ ಸೋನ್​ಪಾಲ್​ ದೂರು ದಾಖಲಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ರಾಮ್​ಪಾಲ್​ರ ಪತ್ನಿ ದುಲಾರೊ ದೇವಿ ಪತಿಯ ಸ್ನೇಹಿತನ ಮನೆಯಲ್ಲಿ ವಾಸವಿದದ್ದು, ಒಂದು ತಿಂಗಳ ಹಿಂದೆ ಮನೆಗೆ ಹಿಂತಿರುಗಿದ್ದರು. ಬಳಿಕ ತನ್ನ ಪತಿ ಕಾಣೆಯಾಗಿರುವ ಬಗ್ಗೆ ಮಗ ಸೋನ್​ಪಾಲ್​ಗೆ ತಿಳಿಸಿದ್ದಾರೆ.

ಬಳಿಕ ಆತ ತನ್ನ ತಂದೆ ಕಾಣೆಯಾಗಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅಧಿಕಾರಿಗಳು ಮೊದಲಿಗೆ ಆತನ ಪತ್ನಿ ದುಲಾರೊ ದೇವಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯೂ ತಪ್ಪೊಪ್ಪಿಕೊಂಡಿದ್ದು ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ತಿಳಿಸಿಲ್ಲ.

ತನ್ನ ಪತಿ ಮಲಗಿದ್ದ ವೇಳೆ ಆತನನ್ನು ಕೊಲೆ ಮಾಡಿ ಬಳಿಕ ತುಂಡು ತುಂಡಾಗಿ ಕತ್ತರಿಸಿ ಮೃತದೇಹವನ್ನು ಮಂಚಕ್ಕೆ ಕಟ್ಟಿ ಕಾಲುವೆಗೆ ಎಸೆದಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.