ನ್ಯೂಸ್

ಮಕ್ಕಳನ್ನು ಕೊಂದು ಫ್ರಿಡ್ಜ್​​ನಲ್ಲಿ​ಟ್ಟ ತಾಯಿ; ಒಂದು ವರ್ಷ ಮನೆಯಲ್ಲಿಯೇ ಇದ್ದ ಶವ!

ದಕ್ಷಿಣ ಕೊರಿಯಾ: ಮಹಿಳೆಯೊಬ್ಬರು ತನ್ನ ಎರಡು ಮಕ್ಕಳನ್ನು ಕೊಂದು ಶವಗಳನ್ನು ವರ್ಷಗಳವರೆಗೆ ಫ್ರಿಡ್ಜ್​​ನಲ್ಲಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸುವಾನ್ ನಗರದ ನಿವಾಸಿಯಾಗಿರುವ ಮಹಿಳೆ ತನ್ನ ನವಜಾತ ಶಿಶುಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. 2018 ಮತ್ತು 2019ರಲ್ಲಿ ಜನಿಸಿದ ಎರಡು ದಿನಗಳ ನಂತರ ತನ್ನ ಎರಡು ನವಜಾತ ಶಿಶುಗಳನ್ನು ಕೊಂದು ಶವಗಳನ್ನು ವರ್ಷಗಳವರೆಗೆ ಫ್ರಿಡ್ಜ್​​ನಲ್ಲಿ ಇರಿಸಿದ್ದಾರೆ. ದಕ್ಷಿಣ ಕೊರಿಯಾದ ಪೊಲೀಸರು ಇತ್ತೀಚೆಗೆ ಮಹಿಳೆಯನ್ನು ಬಂಧಿಸಿದ್ದಾರೆ.

ನಡೆದಿದ್ದೇನು?: 30 ವರ್ಷದ ಮಹಿಳೆಗೆ 12,10 ಹಾಗೂ 8 ವರ್ಷದ ಮೂರು ಮಕ್ಕಳು ಆಕೆಗೆ ಈಗಾಗಲೇ ಇದ್ದು, ಅವರನ್ನು ನೋಡಿಕೊಳ್ಳುವಲ್ಲಿ ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದು, ಇನ್ನೂ ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ ಎಂದು ಆಲೋಚನೆ ಮಾಡಿ ಶಿಶುಗಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಳು.

ಮಹಿಳೆಯು ನವೆಂಬರ್ 2018ರಲ್ಲಿ ನಾಲ್ಕನೇ ಮಗುವನ್ನು ಹತ್ಯೆ ಮಾಡಿದ್ದಳು. ಹೆರಿಗೆಯಾದ ಮರುದಿನ ಹೆಣ್ಣು ಮಗುವನ್ನು ಕತ್ತು ಹಿಸುಕಿ ಮಗುವಿನ ಶವವನ್ನು ತನ್ನ ಮನೆಯ ಫ್ರೀಜರ್​ನಲ್ಲಿರಿಸಿದ್ದಳು. 2019ರಲ್ಲಿ ಜನಿಸಿದ ತನ್ನ ಐದನೇ ಮಗುವಿಗೆ ಅದೇ ರೀತಿ ಮಾಡಿ ಮೃತ ದೇಹಗಳನ್ನು ಫ್ರಿಡ್ಜ್​​ನಲ್ಲಿ ಇರಿಸಿದ್ದಳು.

ಗರ್ಭಪಾತ ಮಾಡಲಾಗಿದೆ ಎಂದು ಆಕೆಯ ಪತಿ ಎಲ್ಲರಿಗೂ ಹೇಳಿದ್ದ, ಆದರೆ ಮೇ ತಿಂಗಳಲ್ಲಿ ಶಿಶುಗಳ ಜನನದ ಗಣತಿ ನಡೆಸಿದಾಗ ಆಸ್ಪತ್ರೆಯಲ್ಲಿ ಮಗು ಹುಟ್ಟಿದೆ ಆದರೆ ಸಾವನ್ನಪ್ಪಿರುವುದು ಹೇಗೆ ಎನ್ನುವ ವಿಚಾರ ಕುರಿತು ತನಿಖೆ ಆರಂಭವಾದ ನಂತರ ಈ ಪ್ರಕಣದ ಹಿಂದೆ ಬಿದ್ದ ಪೊಲೀಸರಿಗೆ ಸತ್ಯ ಬಯಲಾಗಿದೆ.

ಮಹಿಳೆಯ ಮನೆಯಲ್ಲಿ ತಪಾಸಣೆ ನಡೆಸಿದಾಗ ಶಿಶುಗಳ ಶವ ಪತ್ತೆಯಾಗಿದೆ. ಮಹಿಳೆ ಮನೆಯಲ್ಲಿ ಒಂದು ಮಗುವನ್ನು ಮತ್ತು ಆಸ್ಪತ್ರೆಯ ಬಳಿ ಮತ್ತೊಂದು ಮಗುವನ್ನು ಕೊಂದಿದ್ದಾಳೆ ಎಂದು ತಿಳಿದು ಬಂದಿದೆ. ಮಕ್ಕಳು ಹುಟ್ಟಿ ಒಂದು ದಿನದ ಬಳಿಕ ಹತ್ಯೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.