Constable : ಮಹಿಳೆಯೊಬ್ಬರು 7 ವರ್ಷದ ಮಗನ ಸಮ್ಮುಖದಲ್ಲಿಯೇ ತನ್ನ ಪೊಲೀಸ್ ಕಾನ್ಸ್ಟೆಬಲ್ ಪತಿಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆದಿದೆ.
ಡ್ಯಾನಿಲಿಮ್ಡಾ ಪೊಲೀಸ್ ಲೈನ್‌ನಲ್ಲಿ ದಂಪತಿಗೆ ನೀಡಲಾದ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ರವಿ ಮೋಹನ್ ಸೈನಿ ಸೋಮವಾರ (ಆಗಸ್ಟ್ 03) ತಿಳಿಸಿದ್ದಾರೆ.
ಅಹಮದಾಬಾದ್ನಲ್ಲಿ ಎ ಡಿವಿಷನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮುಖೇಶ್ ಪರ್ಮಾರ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ದೀರ್ಘಕಾಲದಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ನಡೆಯುತ್ತಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೋಹನ್ ಸೈನಿ ಹೇಳಿದ್ದಾರೆ.
ಇದನ್ನೂ ಓದಿ: ಆತ ನಿಜಕ್ಕೂ ಅದ್ಭುತ… ಅಂಥಾ ಆಟಗಾರನಿದ್ದರೆ ನಾಯಕತ್ವ ತುಂಬಾ ಸುಲಭ ಎಂದ ಶುಭಮಾನ್ ಗಿಲ್! Shubman Gill
ತಮ್ಮ ಮಗ ಮನೆಯಲ್ಲಿರುವಾಗಲೇ ಬೆಳಗಿನ ವೇಳೆ ದಂಪತಿ ನಡುವೆ ಜಗಳ ನಡೆಯಿತು. ಈ ವೇಳೆ ಸಂಗೀತಾ, ಮರದ ಕೋಲಿನಿಂದ ಮುಖೇಶ್ ತಲೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಾದ ನಂತರ ಸಂಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗೀತಾ ಡೆತ್ನೋಟ್ ಬರೆದಿಟ್ಟಿದ್ದು, ವೈವಾಹಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಜಗಳ ನಡೆದಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಡಿಸಿಪಿ ಹೇಳಿದರು.
ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇದೇ ವೇಳೆ ಡಿಸಿಪಿ ಮೋಹನ್ ಸೈನಿ ತಿಳಿಸಿದ್ದಾರೆ. (ಏಜೆನ್ಸೀಸ್)