ನ್ಯೂಸ್

ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು 4 ವರ್ಷದಲ್ಲಿ 3 ಬಾರಿ ಹೆರಿಗೆಯಾದ ಮಹಿಳೆ! | Prison

Prison: ಮಹಿಳೆಯೊಬ್ಬಳು ಪದೇಪದೆ ಗರ್ಭಿಣಿಯಾಗುವ ಮೂಲಕ ಜೈಲು ಶಿಕ್ಷೆಯಿಂದ ಪಾರಾದ ವಿಚಿತ್ರ ಘಟನೆ ಚೀನಾದಲ್ಲಿ ವರದಿಯಾಗಿದೆ.

ಹೌದು, ಚೆನ್​​ ಹಾಂಗ್​ ಎಂಬ ಹೆಸರು ಹೊಂದಿರುವ ಚೀನಾದ ಮಹಿಳೆ, ಕಳೆದ 4 ವರ್ಷಗಳಲ್ಲಿ 3 ಬಾರಿ ಗರ್ಭಿಣಿಯಾಗಿದ್ದಾಳೆ. ಚೀನೀ ಕಾನೂನಿನ ಪ್ರಕಾರ, ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಜೈಲಿನ ಹೊರಗೆ ತಮ್ಮ ಶಿಕ್ಷೆಯನ್ನು ಅನುಭವಿಸಬಹುದು. ಇದನ್ನು ಸಾಮಾನ್ಯವಾಗಿ ಸ್ಥಳೀಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಹೀಗೆ ಈಕೆ ಮೂರು ಹೆರಿಗೆಗಳ ಮೂಲಕ ಬಹುತೇಕ ಶಿಕ್ಷೆ ಜೈಲು ಹೊರಗಡೆಯೇ ಅನುಭವಿಸಿದ್ದಾಳೆ.

ಈ ಮಹಿಳೆಗೆ ಡಿಸೆಂಬರ್ 2020 ರಲ್ಲಿ ಶಾಂಕ್ಸಿಯಲ್ಲಿ ವಂಚನೆಗಾಗಿ ಐದು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ಅವರು ನಿಜವಾಗಿಯೂ ಶಿಕ್ಷೆಯನ್ನು ಅನುಭವಿಸಲಿಲ್ಲ ಎಂದು ಚೀನಾ ಮಾರ್ನಿಂಗ್​ ಪೋಸ್ಟ್​ ವರದಿ ಮಾಡಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಪದೇಪದೆ ಗರ್ಭೀಣಿಯಾಗುವ ಮೂಲಕ ಹೊರಗಡೆಯೇ ಇರುತ್ತಿದ್ದ ಮಹಿಳೆಯ ನಡುವಳಿಕೆ ಗಮನಿಸಿದ ಪೊಲೀಸರು, ಕೊನೆಗೂ ಆಕೆಯನ್ನು ವಿಚಾರಣೆ ನಡೆಸಲಾಗಿದೆ. ಶಿಕ್ಷೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಆದರೆ, ಸಂಪೂರ್ಣ ತನಿಖೆ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು, ಆಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗರ್ಭಧಾರಣೆ ದುರುಪಯೋಗ ಮಾಡಿಕೊಂಡಿದ್ದಾಳೆ ಎಂದು ಕಂಡುಕೊಂಡಿದ್ದಾರೆ. ಇದೆಲ್ಲಾ ತಿಳಿಯುವ ಹೊತ್ತಿಗೆ ನಾಲ್ಕು ವರ್ಷ ಪೂರ್ಣಗೊಂಡಿದ್ದು, ಇದೀಗ ಉಳಿದ 1 ವರ್ಷ ಶಿಕ್ಷೆ ಅನುಭವಿಸಲು ಮರು ಜೈಲಿಗೆ ಕಳುಹಿಸಿದ್ದಾರೆ.

ಮೊದಲು ಎರಡು ಮಕ್ಕಳು ವಿಚ್ಛೇದಿತ ಗಂಡನಿಂದ ಪಡೆದಿದ್ದು, ಮಾಜಿ ಪತಿಯಲ್ಲಿಯೇ ಮಕ್ಕಳು ಬೆಳೆಯುತ್ತಿವೆ. ಮತ್ತೊಂದು 2025ರ ಮೇ ನಲ್ಲಿ ಜನಿಸಿದ್ದು, ಮಾಜಿ ಪತಿಯ ಸಹೋದರಿ ಹತ್ತಿರ ಬೆಳೆಯುತ್ತಿದೆ. ಅದನ್ನು ದತ್ತು ಪಡೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)