ಶಿಮ್ಲಾ: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂಥ ಪೈಶಾಚಿಕ ಕೃತ್ಯ ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿಂದ ವರದಿಯಾಗಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಏಳು ಆರೋಪಿಗಳನ್ನು ಗಗಾಲ್ ಗಂಜ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಂಗ್ರಾದ ಬನೋಯಿ ಪ್ರದೇಶದಲ್ಲಿರುವ ಬಸ್ನಿಲ್ದಾಣದಲ್ಲಿ 32 ವರ್ಷದ ಮಹಿಳೆ ಬಸ್ಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆರೋಪಿಗಳು, ಲಿಫ್ಟ್ ಕೊಡ್ತೇವೆ ಬಾ ಎಂದು ವಾಹನಕ್ಕೆ ಹತ್ತಿಸಿಕೊಂಡಿದ್ದರು. ವಾಹನದಲ್ಲಿ ಏಳು ಜನರಿದ್ದರು. ಅವರು ಆಕೆಯನ್ನು ಸಲೋಲ್ ಪ್ರದೇಶದಲ್ಲಿರುವ ಪೌಲ್ಟ್ರಿ ಫಾರಂಗೆ ಕರೆದೊಯ್ದರು. ಅಲ್ಲಿ ಗ್ಯಾಂಗ್ ರೇಪ್ ನಡೆಸಿದ ಬಳಿಕ, ಮಕ್ಲಿಯೋದ್ ಗಂಜ್ನ ಹೋಟೆಲ್ಗೆ ಕರೆದೊಯ್ದು ಅಲ್ಲಿ ಮತ್ತೊಂದು ಬಾರಿ ರೇಪ್ ಮಾಡಿದ್ದರು.
ಈ ಘಟನೆಯ ನಂತರ ಮಹಿಳೆಯನ್ನು ಬಿಟ್ಟಿದ್ದರು. ಸಂತ್ರಸ್ತೆ ಮೂರು ಮಕ್ಕಳ ತಾಯಿಯಾಗಿದ್ದು, ಪತಿಯಿಂದ ಬೇರ್ಪಟ್ಟು 5 ವರ್ಷಗಳಿಂದ ಪ್ರತ್ಯೇಕ ವಾಸವಿದ್ದರು. ಈಕೆ ನೀಡಿದ ದೂರಿನ ಪ್ರಕಾರ, ಹೋಟೆಲ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)