ನ್ಯೂಸ್

ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಯ ಸಿದ್ಧತೆಯಲ್ಲಿದ್ದ ಕುಟುಂಬದವರಿಗೆ ಶಾಕ್..! ಅಷ್ಟಕ್ಕೂ ಆಗಿದ್ದೇನು?

ಬೆಳಗಾವಿ: ಈ ಮಹಿಳೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆಯ ಸಿದ್ಧತೆಯಲ್ಲಿ ತೊಡಗಿದ್ದ ಕುಟುಂಬಕ್ಕೆ ಶಾಕ್​ ಕಾದಿತ್ತು. ಇನ್ನೇನು ಅಂತಿಮ ಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಎಲ್ಲ ಬದಲಾಯಿತು...

ಮುಚ್ಚಂಡಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 55 ವರ್ಷದ ಮಾಲು ಯಲ್ಲಪ್ಪ ಚೌಗುಲೆ ಹಲವು ತಿಂಗಳುಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬಸ್ಥರು ಜನವರಿ 7ರಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆ ಬದುಕುವುದು ಗ್ಯಾರಂಟಿ ಇಲ್ಲ ಎಂದು ವೈದ್ಯರು ಹೇಳಿದ್ದರಂತೆ.

ಬದುಕುವ ಸಾಧ್ಯತೆ ತೀರ ಕಡಿಮೆ ಇರುವ ಕಾರಣಕ್ಕೆ ಮಹಿಳೆಯನ್ನು ಕುಟುಂಬದವರು ಆಂಬುಲೆನ್ಸ್​ ಮೂಲಕ ಮನೆಗೆ ಕರೆತಂದಿದ್ದಾರೆ. ಆದರೆ ಆಂಬುಲೆನ್ಸ್​ನಲ್ಲಿ ಬರುವಾಗ ಮಹಿಳೆ ಮೃತಪಟ್ಟಿದ್ದಾರೆ ಎಂದು ಮನೆಯವರು ಭಾವಿಸಿಕೊಂಡಿದ್ದರು. ಹಾಗಾಗಿಯೇ ಸಂಬಂಧಿಕರಿಗೆಲ್ಲ ಸುದ್ದಿ ಮುಟ್ಟಿಸಿದ್ದರು.

ವಿಷಯ ತಿಳಿಯುತ್ತಲೇ ಸಂಬಂಧಿಕರೆಲ್ಲ ಮುಚ್ಚಂಡಿಗೆ ಆಗಮಿಸಿದ್ದರು. ನಿನ್ನೆ ರಾತ್ರಿ ಗ್ರಾಮದಲ್ಲಿ ಅಂತ್ಯಕ್ರಿಯೆಗೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದೇ ಹೊತ್ತಿಗೆ ಮಹಿಳೆ ಕಣ್ಣು ಬಿಟ್ಟಿದ್ದಾರೆ.