ನ್ಯೂಸ್

ನಮ್ಮ ಮೆಟ್ರೋ ರೈಲಿನಲ್ಲಿ ಊಟ ಮಾಡಿ 500 ರೂ. ದಂಡ ಕಟ್ಟಿದ ಮಹಿಳೆ| Bengaluru Metro

ಬೆಂಗಳೂರು: ನಮ್ಮ ಮೆಟ್ರೋ ಆವರಣ ಮತ್ತು ರೈಲಿನೊಳಗೆ ತಿನ್ನುವುದು ಮತ್ತು ಕುಡಿಯುವುದನ್ನು ನಿಷೇಧಿಸಲಾಗಿದ್ದು, ಈ ನಿಯಮಗಳನ್ನು ಉಲ್ಲಂಘಿಸಿದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸುತ್ತದೆ. ಅಂದಹಾಗೆ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಹಿಳಾ ಪ್ರಯಾಣಿಕರೊಬ್ಬರಿಗೆ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸೋಮವಾರ (28) ತಿಳಿಸಿದೆ.

ಈ ಬಗ್ಗೆ ನಮ್ಮ ಮೆಟ್ರೋ ಟ್ವೀಟ್​ ಮಾಡಿದ್ದು, ಮೆಟ್ರೋದಲ್ಲಿ ಮಾದಾವರದಿಂದ ಮಾಗಡಿ ರಸ್ತೆವರೆಗೆ ಪ್ರತಿದಿನ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಬ್ಬರಿಗೆ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಂದು 500 ರೂಪಾಯಿ ದಂಡ ವಿಧಿಸಲಾಗಿದೆ. ಶನಿವಾರದಂದು (ಏ.26) ಮೆಟ್ರೋದಲ್ಲಿ ಪ್ರಯಾಣಿಸುವಾಗ ಆಕೆ ರೈಲಿನೊಳಗೆ ಊಟ ಮಾಡಿದ್ದು, ಇದನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಹೆಳಿದೆ.

ಎಲ್ಲಾ ಪ್ರಯಾಣಿಕರು ಈ ನಿಯಮಗಳನ್ನು ಪಾಲಿಸಲು ಮತ್ತು ಮೆಟ್ರೋ ವ್ಯವಸ್ಥೆಯ ಸ್ವಚ್ಛತೆಯನ್ನು ಎತ್ತಿಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲು BMRCL ಪ್ರೋತ್ಸಾಹಿಸುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ಪಡೆಯಲು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ನಮ್ಮ ಮೆಟ್ರೋ ಕರೆ ನೀಡಿದೆ. ಪ್ರಯಾಣಿಕರು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಪರಿಸರವನ್ನು ಕಾಪಾಡಿಕೊಳ್ಳಲು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂಬುದು ಬಿಎಂಆರ್​ಸಿಎಲ್​ ಉದ್ದೇಶವಾಗಿದೆ.