ನ್ಯೂಸ್

ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್‌

ಪುಣೆ: ಇನ್‌ಸ್ಟಾಗ್ರಾಮ್‌ ರೀಲ್​ಗಾಗಿ ವಿಡಿಯೋ ಚಿತ್ರೀಕರಿಸುವ ವೇಳೆ ಅಪಘಾತ ಉಂಟಾಗಿದ್ದು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಯುವಕರನ್ನು ಅರೆಸ್ಟ್​​ ಮಾಡಲಾಗಿದೆ.

ತಸ್ಲೀಮ್ ಫಿರೋಝ್ ಪಠಾಣ್ (31) ಮೃತ ಮಹಿಳೆ. ತಸ್ಲೀಮ್ ಸೋಲಾಪುರ ಜಿಲ್ಲೆಯ ಬರ್ಶಿ ಮೂಲದವರಾಗಿದ್ದಾರೆ. ಬಂಧಿತರನ್ನು ಅಯಾನ್ ಶಹನೂರ್ ಶೇಖ್ (21) ಮತ್ತು ಝೈದ್ ಜಾವೇದ್ ಶೇಖ್ (22) ಎಂದು ಗುರುತಿಸಲಾಗಿದ್ದು, ಇಬ್ಬರೂ ಸಯ್ಯದ್ ನಗರದ ನಿವಾಸಿಗಳಾಗಿದ್ದಾರೆ.

ಅಯಾನ್ ಅತ್ಯಂತ ವೇಗದಲ್ಲಿ ಬೈಕ್ ಅನ್ನು ಚಲಾಯಿಸಿದ್ದು, ಹಿಂಬದಿ ಸವಾರ ಝೈದ್ ರೀಲ್ಸ್ ಗೆ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದ. ವೇಗದ ಭರಕ್ಕೆ ಮತ್ತೊಂದು ದ್ವಿಚಕ್ರ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದಿದ್ದು, ಅದನ್ನು ಚಲಾಯಿಸುತ್ತಿದ್ದ ತಸ್ಲೀಂ ಪಠಾಣ್ ಮೃತಪಟ್ಟಿದ್ದಾರೆ.

ಪೊಲೀಸರು ಮಂಗಳವಾರ ವನವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.  ಪುಣೆಯ ಮುಹಮ್ಮದ್ ವಾಡಿ ಪ್ರದೇಶದ ಕೃಷ್ಣನಗರದ ಪಾಲ್ಖಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.