ರಾಣೆಬೆನ್ನೂರ: ನಮ್ಮ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಆತ್ಮಸ್ಥೆ$ರ್ಯ ನೀಡುವ ಶಕ್ತಿಯಾಗಿ ನಿಂತಿದೆ ಎಂದು ಪಿಎಸ್ಐ ಸಂಗೀತಾ ದೊಡ್ಡಮನಿ ಹೇಳಿದರು.
ನಗರದ ಬಿಎಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜಿನ 2025&-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾಥಿರ್ನಿಯರ ಸ್ವಾಗತ, ಕ್ರೀಡಾಕೂಟ, ಸಾಂಸತಿಕ, ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾಥಿರ್ನಿಯರು ದೊಡ್ಡ ಗುರಿ ಇಟ್ಟುಕೊಂಡು ಓದಿ ತಂದೆ ತಾಯಂದಿರಿಗೂ ಓದಿದ ಶಾಲಾ ಕಾಲೇಜಿಗೂ ಕೀತಿರ್ ತರಬೇಕು. ಸಾಮಾಜಿಕ ಜಾಲ ತಾಣ, ಮೊಬೈಲ್ನಿಂದ ದೂರವಿದ್ದು ಶಿಕ್ಷಣದ ಗುರಿಯನ್ನು ಸಾಧಿಸಿ ಎಂದರು.
ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದಶಿರ್ ಹಾಗೂ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ವಿದ್ಯಾಥಿರ್ ಜೀವನದ ಸಮಯ ಹಾಳು ಮಾಡಿಕೊಳ್ಳದೆ ಪುಸ್ತಕದ ಓದು ಹಾಗೂ ಶ್ರೇಷ್ಠ ಸಾಧಕರ ಉದಾಹರಣೆ ಇಟ್ಟುಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಎಚ್. ಬಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಎಚ್.ಎ. ಭಿಕ್ಷಾವತಿರ್ಮಠ, ಶಿಕ್ಷಕರಾದ ಸುರೇಂದ್ರ ನಾಯಕ, ಬಿ.ಕೆ. ಚೌಡಣ್ಣನವರ, ಎ. ಶಂಕರನಾಯ್ಕ, ಎಸ್.ಎಚ್. ಹುಚ್ಚಗೊಂಡರ, ಅಶೋಕ ಬಣಕಾರ, ರಾಜಪ್ಪ ಎಂ., ಶಾರದಾ ವಾಲಿ, ಲಚ್ಚನಾಯ್ಕ ಎಲ್. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.