ನ್ಯೂಸ್

VIDEO | ವಿಕಲಚೇತನ ಮಹಿಳೆಯನ್ನು ದರ ದರನೇ ಎಳೆದೊಯ್ದ ಲೇಡಿ ಪೊಲೀಸರು; ಕಾರಣ ಹೀಗಿದೆ

ಉತ್ತರಪ್ರದೇಶ: ಪೊಲೀಸ್​ ಠಾಣೆ ಮುಂದೆ ಧರಣಿ ಕುಳಿತ್ತಿದ್ದ ವಿಕಲಚೇತನ ಮಹಿಳೆಯನ್ನು ಇಬ್ಬರು ಲೇಡಿ ಪೊಲೀಸರು ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯ ಹೊರಗೆ ಈ ಘಟನೆ ಸಂಭವಿಸಿದ್ದು, ದೃಶ್ಯದಲ್ಲಿ ಕಾಣುವಂತೆ ಪ್ರತಿಭಟನೆಗೆ ಕುಳಿತ್ತಿದ್ದ ಮಹಿಳೆಯನ್ನು ಇಬ್ಬರು ಲೇಡಿ ಪೊಲೀಸರು ಆಕೆಯ ಎರಡು ಕೈಯನ್ನು ಹಿಡಿದು ಎಳೆದೊಯ್ದಿದ್ದಾರೆ. ಮಹಿಳೆ ವಿಕಲಚೇತನ ಎನ್ನಲಾಗಿದ್ದು, ಪತಿ ಜತೆಗಿನ ಜಗಳದ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಗೆ ದೂರು ನೀಡಲು ಆಗಮಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.

ಮಹಿಳೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡುವ ಬದಲು ಎಸ್ಪಿ ಕಚೇರಿಯ ಗೋಡೆ ಏರಲು ಯತ್ನಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಸ್ಪಿ ಕೇಶವ ಚಂದ್ರ ಗೋಸ್ವಾಮಿ, ವಿಷಯ ತಿಳಿದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ,(ಏಜೆನ್ಸೀಸ್).