ನ್ಯೂಸ್

VIDEO| ಮಹಿಳೆಯನ್ನು 500 ಮೀಟರ್ ಎಳೆದೊಯ್ದ ಕಾರು ಚಾಲಕ..ಆಕೆಯನ್ನು ರಕ್ಷಿಸಲು ಓಡಿದ ಜನ!

ರಾಜಸ್ಥಾನ: ರಾಜಸ್ಥಾನದಲ್ಲಿ ಕಾರು ಚಾಲಕನೊಬ್ಬ ಮಹಿಳೆಯನ್ನು ಕಾರಿನ ಬಾನೆಟ್ ಮೇಲೆ 500 ಮೀಟರ್ ಎಳೆದೊಯ್ದಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಹನುಮಂತನಗರ ಮುಖ್ಯ ಬಸ್ ನಿಲ್ದಾಣದ ಬಳಿ ಕಾರು ಚಾಲಕನೊಬ್ಬ ಮಹಿಳೆಯನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ. ಚಾಲಕ ಆಕೆಯನ್ನು 500 ಮೀಟರ್​​ವರೆಗೆ ಎಳೆದೊಯ್ದಿದ್ದಾನೆ. ಅನೇಕರು ಅವಳನ್ನು ಉಳಿಸಲು ಹಿಂದೆ ಓಡಿದರು. ಆದರೆ, ಚಾಲಕ ಕಾರು ನಿಲ್ಲಿಸಲಿಲ್ಲ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಇದು ರಾವ್ಲಾ ನಿವಾಸಿಗೆ ಸೇರಿದ ಕಾರು ಎಂದು ಗುರುತಿಸಿದ್ದಾರೆ.

ಈ ಘಟನೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು ಮಹಿಳೆ ಹಾಗೂ ಕಾರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಘಟನೆಯ ವಿಡಿಯೋವನ್ನು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜ್ಯವರ್ಧನ್ ಸಿಂಗ್ ರಾಥೋಡ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಹನುಮಾನ್‌ಗಢದಲ್ಲಿ ಹಗಲು ಹೊತ್ತಿನಲ್ಲಿ ಮಹಿಳೆಯೊಬ್ಬರನ್ನು ಈ ರೀತಿಯಾಗಿ ಎಳೆದುಕೊಂಡು ಹೋಗಿದ್ದಾನೆ. ಗೆಹ್ಲೋಟ್ ಜಿ, ನಿಮ್ಮ ಆಡಳಿತದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿವೆ ಎಂದು ನಿಮಗೆ ತಿಳಿದಿದೆಯೇ?' ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.