ನ್ಯೂಸ್

ನದಿಯಲ್ಲೇ ಕಾದಿತ್ತು ಸಾವು! ನೋಡ ನೋಡುತ್ತಿದ್ದಂತೆ ಮಹಿಳೆಯನ್ನು ಎಳೆದೊಯ್ದ ಮೊಸಳೆ; ದೃಶ್ಯ ಸೆರೆ | Woman Death

Woman Death: ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಮೊಸಳೆಗೆ ಆಹಾರವಾದ ಘಟನೆ ಒಡಿಶಾದ ಜಾಜ್ಪರ ಜಿಲ್ಲೆಯ ಕಾಂಟಿಯಾದಲ್ಲಿ ವರದಿಯಾಗಿದೆ. ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಎಂದಿನಂತೆ ಗ್ರಾಮದ ನದಿಯಲ್ಲಿ ಬಟ್ಟೆಗಳನ್ನು ತೊಳೆಯಲು ಬರುತ್ತಿದ್ದ ಮೃತ ಮಹಿಳೆ ಸೌದಮಿನಿ ಮಹಾಲಾ (55) ಸೋಮವಾರವು ನದಿಯತ್ತ ಬಂದಿದ್ದರು. ಈ ವೇಳೆ ತನ್ನ ಪ್ರಾಣಪಕ್ಷಿ ಇಲ್ಲಿಯೇ ಹಾರಿ ಹೋಗುತ್ತೆ ಎಂಬ ಊಹೆಯೂ ಇಲ್ಲದ ಮಹಾಲಾಳನ್ನು ಮೊಸಳೆ ಏಕಾಏಕಿ ನೀರಿನೊಳಗೆ ಎಳೆದೊಯ್ದ ದೃಶ್ಯ ಒಂದು ನಿಮಿಷ ಸ್ಥಳೀಯರನ್ನು ನಿಬ್ಬೆರಗಾಗಿಸಿತು.

ಮೊಸಳೆ ಹಿಡಿದ ಕೂಡಲೇ ಸಹಾಯಕ್ಕೆ ಚೀರಾಡಿದ ಮಹಿಳೆಗೆ ಯಾರಿಂದಲೂ ಸಹಾಯ ಸಿಗಲಿಲ್ಲ. ಕ್ಷಣಮಾತ್ರದಲ್ಲಿ ನೀರಿನೊಳಗೆ ಎಳೆದೊಯ್ದ ಮೊಸಳೆ, ಮಹಾಲಾಳ ಸುಳಿವು ಸಿಗದಂತೆ ಹೋಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕಳೆದ ಕೆಲವು ತಿಂಗಳ ಹಿಂದೆ ಇದೇ ರೀತಿ ಮೊಸಳೆಯೊಂದು ಕುರಿಯನ್ನು ಎಳೆದೊಯ್ದ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಘಟನೆ ಬಳಿಕ ಸ್ಥಳೀಯರು ಭಯಭೀತಿಗೆ ಒಳಗಾಗಿದ್ದು, ಮೊಸಳೆ ಸೆರೆಗೆ ಅರಣ್ಯ ಇಲಾಖೆಯ ರಕ್ಷಣೆಯ ಕೋರಿದ್ದಾರೆ,(ಏಜೆನ್ಸೀಸ್).