ನ್ಯೂಸ್

ಡೆತ್​​ನೋಟ್​ ಬರೆದಿಟ್ಟು ನೇಣಿಗೆ ಶರಣಾದ ಗೃಹಿಣಿ; ತನಿಖೆ ಆರಂಭ

ಕೋಲಾರ: ಗೃಹಿಣಿಯೊಬ್ಬರು ಡೆತ್​​ನೋಟ್​ ಬರೆದಿಟ್ಟು ನೇಣು ಬಿಗಿದುಕೊಂಡು ಸಾವಪ್ಪಿರುವ ಘಟನೆ ಕೋಲಾರ ಜಿಲ್ಲೆಯಿಂದ ವರದಿಯಾಗಿದೆ. ಕೋಲಾರ ತಾಲ್ಲೂಕಿನ ಕಲ್ವಮಂಜಲಿ ಗ್ರಾಮದ ನಿವಾಸಿಯಾಗಿದ್ದ 25 ವರ್ಷದ ಚೈತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವೇಮಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೃಹಿಣಿ ಚೈತ್ರ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಆದರೆ, ಚೈತ್ರ ಸಂಬಂಧಿಕರಿಂದ ಕೊಲೆ ಆರೋಪ ಮಾಡಲಾಗಿದ್ದು, ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.