ನ್ಯೂಸ್

GirlFriend ಜತೆ ಕಾರಿನಲ್ಲಿ ಸುತ್ತಾಡುವಾಗ ಪತ್ನಿಯ ಕೈಗೆ ಸಿಕ್ಕಿಬಿದ್ದ ಪತಿ; ಮುಂದೇನಾಯ್ತು ನಡೆದಿದ್ದು ಮಾತ್ರ...

ಭೋಪಾಲ್​​: ಇತ್ತೀಚಿನ ವರ್ಷಗಳಲ್ಲಿ ನಾವು ನೋಡಿರುವಂತೆ ಮದುವೆಯಾಚೆಗಿನ ಸಂಬಂಧಗಳು ಹೆಚ್ಚು ಸದ್ದು ಮಾಡುತ್ತಿದ್ದು, ವಿವಾಹಿತರು ಮದುವೆಯಾದ ಬಳಿಕವೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿರುವ ಸುದ್ದಿಯನ್ನು ನಾವು ನಿರಂತರವಾಗಿ ಕೇಳಿದ್ದೇವೆ ಹಾಗೂ ನೋಡಿದ್ಧೇವೆ. ಅನೈತಿಕ ಸಂಬಂಧ (illicit Relationship) ಕಾರಣ ಮನೆ ಜಗಳ ಬೀದಿ ರಂಪವಾಗಿ ಕೊಲೆಗಳು ಸಹ ನಡೆದು ಹೋಗಿವೆ. ಇದೀಗ ಅಂತಹದ್ದೆ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದು, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಇಂದೋರ್​ ರಸ್ತೆಯೊಂದರಲ್ಲಿ ಮಹಿಳೆಯೊಂದಿಗೆ (GirlFriend) ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಇದನ್ನು ಕಂಡ ವ್ಯಕ್ತಿಯ ಪತ್ನಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನಲ್ಲಿದ್ದ ಮತ್ತೋರ್ವ ಮಹಿಳೆಯನ್ನು (GirlFriend) ನಿಂದಿಸಿ ಹಿಗ್ಗಾಮುಗ್ಗಾ ಥಳಿಸಲು ಶುರು ಮಾಡಿದ್ದಾಳೆ. ಇದನ್ನು ಮಹಿಳೆಯ ಪತಿ ನೋಡುತ್ತ ಕಾರಿನಲ್ಲಿ ಸುಮ್ಮನೆ ಕುಳಿತಿದ್ದು, ಜನರು ಅದನ್ನು ವಿಡಿಯೋ ಮಾಡುತ್ತ ನಿಂತಿದ್ದಾರೆ. ಪ್ರಕರಣ ಸದ್ಯ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ನೀಮುಚ್​ ಜಿಲ್ಲೆಯ ಸಾವನ್​ ಗ್ರಾಮದ ಸರಪಂಚ್​ ಆದ ಜಿತೇಂದ್ರ ಮಾಲಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಪೂಜಾ (GirlFriend) ಎಂಬುವವರ ಜೊತೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ. ಈ ವಿಚಾರವನ್ನು ತಿಳಿದ ಎರಡನೇ ಪತ್ನಿ ಉಷಾ ಆರ್ಯ ಇವರಿಬ್ಬರ ವಾಟ್ಸ್​ಆ್ಯಪ್​ ಚಾಟ್​ಗಳನ್ನು ನೋಡಿದ್ದು, ಆ ಬಳಿಕ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಈ ಬಗ್ಗೆ ಆತನನ್ನು ವಿಚಾರಿಸಿದಾಗ ಆತ ಈಕೆಯ ಜೊತೆ (GirlFriend) ಮೂರನೇ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದು, ಈ ವಿಚಾರವಾಗಿ ಪೂಜಾ ಹಾಗೂ ಉಷಾ ನಡುವೆ ಈಗಾಗಲೇ ಗಲಾಟೆಯಾಗಿದ್ದು, ತನ್ನ ಪತಿಯ ತಂಟೆಗೆ ಬಾರದಂತೆ ಉಷಾ ವಾರ್ನಿಂಗ್​ ಕೊಟ್ಟಿದ್ದರಂತೆ. ಇದಾದ ಬಳಿಕ ಇವರಿಬ್ಬರು ಜೊತೆಯಾಗಿ ಓಡಾಡುತ್ತಿರುವುದನ್ನು ಗಮನಿಸಿದ ಉಷಾ ಪೂಜಾ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.